6

ಶಿರೂರು ಭೂ ಕುಸಿತ: ನೆರವು ನೀಡಲು ಹೋದವನೂ ನಾಪತ್ತೆ

ಅಂಕೋಲಾದ ಶಿರೂರು ಭೂ ಕುಸಿತದಲ್ಲಿ ಕುಮಟಾದ ಜಗನ್ನಾಥ ನಾಯ್ಕ (61) ಎಂಬಾತರು ಸಿಲುಕಿದ್ದು, ಈವರೆಗೂ ಅವರ ಸುಳಿವು ಸಿಕ್ಕಿಲ್ಲ. ಅವರು ಬದುಕಿರುವ ಬಗ್ಗೆಯೂ ಮಾಹಿತಿ ಇಲ್ಲ. ಸಾವನಪ್ಪಿದ ಬಗ್ಗೆಯೂ ಖಚಿತ ಖಚಿತವಾಗಿಲ್ಲ.

ಕುಮಟಾ ತಾಲೂಕಿನ ಬಾಡ-ಹುಬ್ಬಣಗೇರಿಯ `ಬಾಬ್ಲುಮನೆ’ಯ ಜಗನ್ನಾಥ ನಾಯ್ಕ ಶಿರೂರಿನಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕರ ಭಾವ. ಲಕ್ಷ್ಮಣ ನಾಯ್ಕರ ಅಕ್ಕನನ್ನು ವರಿಸಿದ ಜಗನ್ನಾಥ್ ಶಿರೂರಿನಲ್ಲಿಯೇ ಬರೆ ಮನೆ ನಿರ್ಮಿಸಿಕೊಂಡಿದ್ದರು. ಭೂ ಕುಸಿತದ ದಿನ ಬೆಳಗ್ಗೆ ಬಾವನನ್ನು ಮಾತನಾಡಿಸಿಕೊಂಡು ಬರಲು ಚಹಾದ ಅಂಗಡಿಗೆ ಹೋಗಿದ್ದರು. ನಂತರ ಅವರು ಎಲ್ಲಿ ಹೋದರು? ಎಂಬುದು ಯಾರಿಗೂ ಗೊತ್ತಾಗಿಲ್ಲ.

`ಬಾವನಿಗೆ ಜ್ವರ ಬಂದಿದೆ. ಸ್ವಲ್ಪ ಸಹಾಯ ಮಾಡಿ ಬರುತ್ತೇನೆ’ ಎಂದು ಹೇಳಿ ಹೋಗಿದ್ದ ಜಗನ್ನಾಥ್ ಮನೆಗೆ ಮರಳಿಲ್ಲ. ಇದರಿಂದ ಅವರ ಪತ್ನಿ ಹಾಗೂ ಮೂರು ಹೆಣ್ಣು ಮಕ್ಕಳು ಆತಂಕದಲ್ಲಿದ್ದಾರೆ. ಆ ಕುಟುಂಬದವರು ಜಗನ್ನಾಥರ ಫೋಟೋ ಹಿಡಿದು ಅವರಿವರ ಬಳಿ ವಿಚಾರಿಸುತ್ತಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page