ಶಿರಸಿಯಿಂದ ಕುಮಟಾಗೆ ತೆರಳುವ ರಸ್ತೆಯಲ್ಲಿ ನಸುಕಿನ 2 ಗಂಟೆ ವೇಳೆಗೆ ಭಾರೀ ಪ್ರಮಾಣದ ಗುಡ್ಡ ಕುಸಿದಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ದೇವಿಮನೆ ಘಟ್ಟ ಹಾಗೂ ರಾಗಿ ಹೊಸಳ್ಳಿ ಬಳಿ ಗುಡ್ಡ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ವಿವಿಧ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ವಿವಿಧ ಯಂತ್ರಗಳ ಮೂಲಕ ಮಣ್ಣನ್ನು ಹೊರ ಸಾಗಿಸುವ ಕೆಲಸ ನಡೆಯುತ್ತಿದೆ. ವ್ಯಾಪಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸಂಜೆಯ ಒಳಗೆ ಈ ಮಾರ್ಗ ಸರಿಯಾಗುವ ಸಾಧ್ಯತೆಗಳಿದೆ.
ಗುಡ್ಡ ತೆರವಿನ ವಿಡಿಯೋ ಇಲ್ಲಿ ನೋಡಿ..








