6

ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌

ಮನೆಯಲ್ಲಿ ತಾಯಿಯಿಂದ ಕೇಳಿ ಕೇಳಿಯೇ ಭಗವದ್ಗೀತೆಯ ಒಂದು ಅಧ್ಯಾಯವನ್ನೇ ಕಂಠಪಾಠ ಮಾಡಿ ಹೇಳುವ ಪುಟಾಣಿ ಪ್ರತಿಭೆ ಇದಕ್ಕೊಂದು ಉತ್ತಮ‌ ನಿದರ್ಶನ. ಅವಳ ಹೆಸರು ಮೇದಿನಿ ಹೆಬ್ಬಾರ್. ವಯಸ್ಸು ಕೇವಲ ನಾಲ್ಕು ವರ್ಷ. ಇನ್ನೂ ಓದಲು, ಬರೆಯಲು ಬಾರದು. ಇದನ್ನೆಲ್ಲ ಬಲ್ಲವರೂ ಮಾಡದ ಸಾಧನೆಯನ್ನು ಈ ವಯಸ್ಸಿನಲ್ಲೇ ಮೇದಿನಿ ಮಾಡಿದ್ದಾಳೆ.

ಹಳವಳ್ಳಿಯ ಕೃಷ್ಣಮೂರ್ತಿ ಹೆಬ್ಬಾರ ಹಾಗೂ ವಿದ್ಯಾ ಹೆಬ್ಬಾರ ದಂಪತಿಯ ಪುತ್ರಿಯಾಗಿರುವ ಮೇದಿನಿ, ಭಗವದ್ಗೀತೆಯ ಮೊದಲ‌ ಅಧ್ಯಾಯವನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿದ್ದಾಳೆ. ತಾಯಿ ವಿದ್ಯಾ ಹೆಬ್ಬಾರ ಅವರು ಹೇಳುವುದನ್ನು ಕೇಳಿ ಕೇಳಿಯೇ ಇಡೀ ಅಧ್ಯಾಯವನ್ನು ಕಂಠಪಾಠ ಮಾಡಿರುವುದು ವಿಶೇಷ.

ಮೇದಿನಿ ಭಗವದ್ಗೀತೆಯ ಶ್ಲೋಕಗಳನ್ನು ಹೇಳುವ ವಿಡಿಯೊ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಡಿನಾದ್ಯಂತ ಭಗವದ್ಗೀತಾ ಅಭಿಯಾನದ ಮೂಲಕ ಗೀತೆಯ ಮಹತ್ವ ಸಾರುತ್ತಿರುವ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಸಮ್ಮುಖದಲ್ಲಿಯೂ ಮೇದಿನಿ ಗೀತೆಯ ಶ್ಲೋಕಗಳನ್ನು ಪ್ರಸ್ತುತಪಡಿಸಿದ್ದಾಳೆ. ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ, ಭವಿಷ್ಯ ಉಜ್ವಲವಾಗಲೆಂದು ಆಶೀರ್ವದಿಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page