6

“ರಾಜ್ಯ ಸರ್ಕಾರ ಜನರನ್ನು ಪ್ರಾಣಿಗಳಂತೆ ಕಾಣುತ್ತಿದೆ!”

ಕಾಂಗ್ರೆಸ್ ಸರ್ಕಾರ ಬರ ಪರಿಹಾರದ ಹಣವನ್ನೂ ಸರಿಯಾಗಿ ತಲುಪಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಹಾರದ ಹಣವನ್ನೂ ಸರಿಯಾಗಿ ತಲುಪಿಸುತ್ತಿಲ್ಲ. ಈ ಸರ್ಕಾರ ಜನರನ್ನು ಪ್ರಾಣಿಗಳಂತೆ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ಮೂರು ವರ್ಷಗಳಲ್ಲಿ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಹಾಗೂ ಸೇವಾ ಶುಲ್ಕಗಳನ್ನು ಏರಿಕೆ ಮಾಡುತ್ತಿದೆ .

ಹಾಲು, ನೀರು, ವಿದ್ಯುತ್, ಡೀಸೆಲ್, ಮದ್ಯ ಹಾಗೂ ಭೂ ಕಂದಾಯ ಸೇರಿದಂತೆ ಎಲ್ಲ ಸೌಕರ್ಯಗಳ ದರ ಗಗನಕ್ಕೇರಿದೆ. ರಾಜ್ಯದ ಜನತೆಯ ಮೇಲೆ ಸುಮಾರು 1 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹೊಸ ತೆರಿಗೆಯನ್ನು ಹೇರಲಾಗಿದೆ ಎಂದು ಆರೋಪಿಸಿದರು. ​ಸಾಲದ ಹೊರೆ: ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು 4 ಲಕ್ಷ ಕೋಟಿ ರೂ.ಗಳ ಸಾಲ ಮಾಡಿದ್ದು, ಇದು ಕರ್ನಾಟಕದ ಜನತೆಯ ಮೇಲೆ ತೀವ್ರವಾದ ಆರ್ಥಿಕ ಹೊರೆಯನ್ನು ಸೃಷ್ಟಿಸಿದೆ ಎಂದು ಟೀಕಿಸಿದರು. ​ಬಿಜೆಪಿ ಪ್ರತಿಭಟನೆ: ಸರ್ಕಾರದ ಜನವಿರೋಧಿ ಮತ್ತು ಅಭಿವೃದ್ಧಿ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ ಎಂದು ಹೇಳಿದರು.

​ಬರ ಪರಿಹಾರ ವಿಳಂಬ ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಮಾತ್ರ ಗೂಬೆ ಕೂರಿಸದೆ, ರಾಜ್ಯ ಸರ್ಕಾರವೇ ತನ್ನ ಬೊಕ್ಕಸದಿಂದ ರೈತರನ್ನು ರಕ್ಷಿಸಲು ಮುಂದಾಗಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರವಾಹ ಬಂದಿತ್ತು. ಕೇಂದ್ರ ಸರ್ಕಾರದ ಪರಿಹಾರಕ್ಕೆ ಕಾಯದೇ ಒಂದು ತಿಂಗಳಲ್ಲಿ ರೈತರಿಗೆ 1700 ಕೋಟಿ ರೂ. ಪರಿಹಾರ ನೀಡಿದ್ದೇವು. ನಂತರ ಕೇಂದ್ರ ಸರ್ಕಾರ ಕೊಟ್ಟಿತ್ತು. ಸರ್ಕಾರದ ಕಡೆಯಿಂದ ರೈತರಿಗೆ ತಲುಪುತ್ತಿರುವ ಪರಿಹಾರ ಅತ್ಯಲ್ಪವಾಗಿದ್ದು, ಅದು ಸರಿಯಾದ ಸಮಯಕ್ಕೆ ರೈತರನ್ನು ತಲುಪುತ್ತಿಲ್ಲ. ಈ ಸರ್ಕಾರ ಜನರನ್ನು ಪ್ರಾಣಿಗಳಂತೆ ಕಾಣುತ್ತಿದೆ ಎಂದು ಆರೋಪಿಸಿದರು.

  • Related Posts

    ಹಾವೇರಿ – ಯಾವ ತಾಲೂಕಿನಲ್ಲಿ ಹೋರಿ ಹಬ್ಬದ ಸಂಭ್ರಮ ಹೆಚ್ಚು? ವೋಟ್ ಮಾಡಿ

    Share this… Facebook Pinterest Twitter Linkedin Whatsapp

    ಕಬ್ಬು ಬೆಳೆಗಾರರ ಸಮಸ್ಯೆ: ಕೇಂದ್ರ ತಂಡದ ಜೊತೆ ಸಚಿವರ ಮಹತ್ವದ ಚರ್ಚೆ

    Share this… Facebook Pinterest Twitter Linkedin Whatsappಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಕೇಂದ್ರ ಅಧ್ಯಯನ ತಂಡದೊಂದಿಗೆ ಸಚಿವರಾದ ರುದ್ರಪ್ಪ ಲಮಾಣಿ, ಲಕ್ಷ್ಮಣ ಸವದಿ ಮಹತ್ವದ ಚರ್ಚೆ – ಕಬ್ಬಿನ ಬೆಲೆ ನಿಗದಿ, ತೂಕದ ಪಾರದರ್ಶಕತೆ ಹಾಗೂ ರೈತರಿಗೆ ನ್ಯಾಯಯುತ ಬೆಲೆ…

    You cannot copy content of this page