6

ಶಿರೂರು: ಶಾಲೆಗೆ ರಜೆ ನೀಡಿದ್ದರಿಂದ ಉಳಿಯಿತು ಮಕ್ಕಳ ಜೀವ!

ಜನರ ಜೀವ ಉಳಿಸಿದ ಜಿಲ್ಲಾಧಿಕಾರಿ ಆದೇಶ |ಚಾಲಕ ವಿನೋದ ನಾಯ್ಕ ಮನದಾಳ | ಪತ್ತೆಯಾಗದ ಲೋಕೇಶನ ಲೊಕೇಶನ್

`ಪ್ರತಿ ದಿನ ಬೆಳಗ್ಗೆ 8.45ರ ಆಸುಪಾಸಿಗೆ ಗೋಕರ್ಣ-ಅಂಕೋಲಾ ಬಸ್ಸು ಶಿರೂರು ಗುಡ್ಡದ ಚಹಾ ಅಂಗಡಿ ಮುಂದೆ ಹಾದುಹೋಗುತ್ತಿತ್ತು. ಜುಲೈ 16ರಂದು ಶಾಲಾ-ಕಾಲೇಜಿಗೆ ರಜೆ ಇದ್ದ ಕಾರಣ ಮಕ್ಕಳು ಬಸ್ಸಿಗೆ ಬಂದಿರಲಿಲ್ಲ. ಹೀಗಾಗಿ ಅಂದು ಬಸ್ಸನ್ನು ಎಲ್ಲಿಯೂ ಹೆಚ್ಚು ಸಮಯ ನಿಲ್ಲಿಸದೇ ಕೊಂಚ ಬೇಗ ಅಂಕೋಲಾ ತಲುಪಿದ್ದು, ಅಕಸ್ಮಾತ್ ಅಂದು ಶಾಲಾ ಮಕ್ಕಳು ಬಸ್ಸಿನಲ್ಲಿದ್ದರೆ ಅವರೆಲ್ಲರ ಜೊತೆ ನಾನು ನದಿ ಆಳ ಸೇರುತ್ತಿದ್ದೆ’ ಎಂದು ಜುಲೈ 16ರ ಘಟನಾವಳಿಗಳನ್ನು ನೆನಪಿಸಿಕೊಂಡು ಬಸ್ ಚಾಲಕ ವಿನೋದ ನಾಯ್ಕ ಒಮ್ಮೆಗೆ ಬೆಚ್ಚಿಬಿದ್ದರು.
ವಿನೋದ ನಾಯ್ಕ ಅಂಕೋಲಾ-ಗೋಕರ್ಣ ಬಸ್ ಚಾಲಕ. ನಿತ್ಯ ಗೋಕರ್ಣದ ಪ್ರಯಾಣಿಕರನ್ನು ಅಂಕೋಲಾಗೆ ಕರೆತರುವುದು ಹಾಗೂ ಸುರಕ್ಷಿತವಾಗಿ ಅವರನ್ನು ಗೋಕರ್ಣ ಬಸ್ ನಿಲ್ದಾಣಕ್ಕೆ ಮರಳಿ ಕರೆದೊಯ್ಯುವುದು ಅವರ ಜವಾಬ್ದಾರಿ. ಅದರಂತೆ ಜುಲೈ 16ರಂದು ಸಹ ಅವರು ಗೋಕರ್ಣದಿಂದ ಅಂಕೋಲಾಗೆ ಬಸ್ ಓಡಿಸಿದ್ದರು. ಶಿರೂರು ಗುಡ್ಡದ ಅಡಿಯ ಚಹದ ಅಂಗಡಿಯಲ್ಲಿ ಕಾಣಿಸಿದ ತಮ್ಮದೇ ಊರಿನ ಲೋಕೇಶನಿಗೆ ಹಾರ್ನ್ ಮಾಡಿದ್ದರು. ಆತ, ಸಹ ನಗುಮುಖದಿಂದ ಕೈ ಬೀಸಿ ಶುಭ ಕೋರಿದ್ದ. ಅದಾಗಿ ಅವರು ಬಸ್ಸನ್ನು ಅಂಕೋಲಾಗೆ ಮುಟ್ಟಿಸುವುದರೊಳಗೆ ಗುಡ್ಡ ಕುಸಿತದ ಆಘಾತದ ಸುದ್ದಿ ಕಿವಿಗೆ ಅಪ್ಪಳಿಸಿತ್ತು. ವಿನೋದ ನಾಯ್ಕ ಅಂದು ಓಡಿಸಿದ ಬಸ್ಸಿನಲ್ಲಿ 38 ಪ್ರಯಾಣಿಕರಿದ್ದರು. ಶಾಲೆಗೆ ರಜೆ ಇಲ್ಲದಿದ್ದರೆ 70ಕ್ಕೂ ಅಧಿಕ ಜನ ಬಸ್ಸಿನೊಳಗೆ ಇರುತ್ತಿದ್ದರು. ಅಂದು ಆ ಬಸ್ಸು 15 ನಿಮಿಷ ತಡವಾಗಿದ್ದರೂ ಅದಷ್ಟೂ ಜೀವ ಗುಡ್ಡಕ್ಕೆ ಬಲಿಯಾಗುತ್ತಿತ್ತು.
ಅಂದಿನ ಘಟನಾವಳಿಗಳ ಬಗ್ಗೆ ಬಸ್ ಚಾಲಕ ವಿನೋದ ನಾಯ್ಕ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..

 

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page