6

ಭಾರೀ ಮಳೆ ಜೊತೆ ಭೂ ಕಂಪನ: ರಸ್ತೆ ನಡುವೆ ದೊಡ್ಡ ಬಿರುಕು

ಅತಿಯಾದ ಮಳೆ, ಭೂ ಕಂಪನದ ಕಾರಣ ಶಿರಸಿ ಯಲ್ಲಾಪುರ ಹಾಗೂ ಅಂಕೋಲಾ ಸಂಪರ್ಕಕ್ಕೆ ಅನುಕೂಲವಾಗಿದ್ದ ಕನಕನಳ್ಳಿಯ ಬಳಜಗ್ಗೆ ಮೇಲ್ಬಾಗದ ಬಳಿ ಶನಿವಾರ ಸಂಜೆ ರಸ್ತೆ ಇಬ್ಬಾಗವಾಗಿದೆ.
ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರದೇಶದ ರಸ್ತೆ ಇದಾಗಿದ್ದು, ಮಳೆ ಮುಂದುವರೆದರೆ ಮತ್ತೆ 2 ಎಕರೆ ಕ್ಷೇತ್ರ ಕುಸಿಯುವ ಸಾಧ್ಯತೆಗಳಿದೆ. ಕನಕನಹಳ್ಳಿಯಿಂದ ಮುಸ್ಕಿ – ಕಕ್ಕಳ್ಳಿ – ಶಿರಸಿಗೆ ತೆರಳುವ ರಸ್ತೆ ನಡುವೆ ಕಂದಕ ನಿರ್ಮಾಣವಾಗಿದೆ. ಕನಕನಳ್ಳಿ ಹಾಗೂ ಸುತ್ತಮುತ್ತಲಿನ ಜನ ಶಿರಸಿಗೆ ತೆರಳಲು ಈ ರಸ್ತೆಯನ್ನು ಉಪಯೋಗಿಸುತ್ತಿದ್ದರು. ನೆರೆ ಪ್ರವಾಹದ ಅವಧಿಯಲ್ಲಿ ಮತ್ತಿಘಟ್ಟ-ಹಳಿವಳ್ಳಿ ಭಾಗದವರ ಸಂಚಾರಕ್ಕೆ ಈ ರಸ್ತೆ ಸಾಕಷ್ಟು ಸಹಕಾರಿಯಾಗಿತ್ತು.
ಈ ಮಾರ್ಗದಲ್ಲಿ ಬೇಸಿಗೆ ಅವಧಿಯಲ್ಲಿ ಅತ್ಯಧಿಕ ಜನ ಸಂಚರಿಸುತ್ತಿದ್ದು, ಮಳೆಗಾಲದ ಅವಧಿಯಲ್ಲಿ ಜನ ಬೈಕ್ ಹಾಗೂ ಜೀಪ್’ಗಳನ್ನು ಮಾತ್ರ ಈ ರಸ್ತೆಯಲ್ಲಿ ಓಡಿಸುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಮತ್ತಿಘಟ್ಟ ರಸ್ತೆಯ ಮೋರಿ ಕುಸಿತವಾದ ಕಾರಣ ಸಂಚಾರ ಅಸ್ತವ್ಯಸ್ಥವಾಗಿತ್ತು. ಇದೀಗ ಮುಸ್ಕಿ ಘಟ್ಟ ಪ್ರದೇಶದಲ್ಲಿ ಸಹ ರಸ್ತೆ ಇಬ್ಬಾಗವಾಗಿದ್ದರಿಂದ ಸಂಚಾರ ಪೂರ್ತಿಯಾಗಿ ಸ್ಥಗಿತಗೊಂಡಿದೆ.
ರಸ್ತೆ ಕುಸಿತ ಹಾಗೂ ಆ ಪ್ರದೇಶದ ವಿಡಿಯೋ ಇಲ್ಲಿ ನೋಡಿ..

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page