6

Yakshagana | ಕಾಲೇಜು ಮಕ್ಕಳಿಗೆ ಕಥೆ ಹೇಳಿದ ಯಕ್ಷಕನ್ಯೆ!

ತನ್ನ ಮೂರನೇ ವಯಸ್ಸಿನಲ್ಲಿ ಯಕ್ಷಗಜ್ಜೆ ಕಟ್ಟಿ ವಿಶ್ವಶಾಂತಿಯ ಸಂದೇಶ ಸಾರಿದ ಶಿರಸಿಯ (Sirsi) ತುಳಸಿ ಹೆಗಡೆ ಹಳಿಯಾಳದ (Haliyal) ಕೆಎಲ್‌ಎಸ್ ವಿಡಿಐಟಿ ಕಾಲೇಜಿನಲ್ಲಿ ಯಕ್ಷವೇಷ ಧರಿಸಿ ಮೈಕ್ ಹಿಡಿದಿದ್ದು, ಅಲ್ಲಿ ನೆರೆದಿದ್ದವರಿಗೆ ‘ಜೀವನದಲ್ಲಿ ಕಂಡ ಕನಸು ನನಸು ಮಾಡಿಕೊಳ್ಳಲು ಶ್ರಮ ಅಗತ್ಯ’ ಎಂದು ಕಥೆಯ ಹೇಳುವ ಮೂಲಕ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ (Yakshagana) ಕಲೆ ಪ್ರದರ್ಶಿಸಿ ಮನ್ನಣೆಗಳಿಸಿರುವ ಅವರ ಭಾಷಣ ಇದೀಗ ಗಮನಸೆಳೆಯುತ್ತಿದೆ.

ಯಕ್ಷನಿಧಿ, ಕದಂಬರತ್ನ, ಕೊಂಕಣ ಭೂಷಣ ಪುರಸ್ಕೃತರಾದ ತುಳಸಿ ಹೆಗಡೆ ಈ ವೇಳೆ `ಬಾಲಕೃಷ್ಣನ ಲೀಲೆ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದರು. ಯಕ್ಷಗಾನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕಾಲೇಜು ಪ್ರಾಚಾರ್ಯ ಡಾ ವಿ. ಎ. ಕುಲಕರ್ಣಿ ಕಲಾವಿದೆಯನ್ನು ಗೌರವಿಸಿದರು. ಕಾಲೇಜಿನ ಲಕ್ಷ್ಮಿ ಹಟ್ಟಿಹೋಳಿ, ಸ್ನೇಹಾ ಕುಲಕರ್ಣಿ, ಫರಜಾನಾ ನದಾಫ್, ರವೀಂದ್ರ ಮೊಟೆಕರ್, ಸೂರಜ್ ಕಡ್ಲಿ, ನವೀನ್ ಹಿರೇಮಠ ಈ ಘಳಿಗೆಗೆ ಸಾಕ್ಷಿಯಾದರು.
ಯಕ್ಷಕನ್ಯೆ ತುಳಸಿ ಹೆಗಡೆ ಅವರ ಭಾಷಣ ಇಲ್ಲಿ ನೋಡಿ..

 

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page