6

ನಿಂತ ವಾಹನಕ್ಕೆ ಗುದ್ದಿದ ಬೈಕ್: ಅತಿ ವೇಗ ತಂದ ಆಪತ್ತು

ಯಲ್ಲಾಪುರ: ಕಾಳಮ್ಮನಗರದ ಖಾಸಿಂ ಎಂಬಾತ ಪಟ್ಟಣದಲ್ಲಿ ಅತಿ ವೇಗದಿಂದ ಬೈಕ್ ಓಡಿಸಿದ್ದು ನಿಂತ ವಾಹನಕ್ಕೆ ಆತನ ಬೈಕ್ ಗುದ್ದಿದೆ. ಪರಿಣಾಮ ಆತ ಗಂಭೀರ ಗಾಯಗೊಂಡಿದ್ದಾನೆ.

ಶುಕ್ರವಾರ ಮಧ್ಯಾಹ್ನ ಹುಬ್ಬಳ್ಳಿ – ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಓಡಿಸಿಕೊಂಡು ಬಂದ ಖಾಸಿಂ ಕ್ರೋಸ್ಟಲ್ ಕ್ರೌನ್ ಎದುರಗಡೆ ನಿಂತಿದ್ದ ಬುಲೇರೋ ವಾಹನಕ್ಕೆ ಬೈಕ್ ಗುದ್ದಿದ್ದಾನೆ. ಬೈಕ್ ಸಂಪೂರ್ಣ ನುಚ್ಚು ನೂರಾಗಿದ್ದು, ಸವಾರ ಸಹ ಸ್ಥಳದಲ್ಲಿ ಬಿದದು ಪೆಟ್ಟು ಮಾಡಿಕೊಂಡಿದ್ದಾನೆ. ತಾಲೂಕಾ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಂತರ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇಲ್ಲಿ ನೋಡಿ..

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    You cannot copy content of this page