6

ಯಕ್ಷಶ್ರೀ | ಹಾಡಕೈ ಹೆಗಡೆರಿಗೆ ಮದ್ಧಲೆಯೇ ಉಸಿರು!

ಬಾಲ್ಯದಿಂದಲೂ ಯಕ್ಷಗಾನದಲ್ಲಿ ಅಪಾರ ಆಸಕ್ತಿ ಹೊಂದಿದ ಜನಾರ್ಧನ ಹೆಗಡೆ ಹಾಡಿಕೈ ಅವರು ಮೂರು ದಶಕಗಳ ಕಾಲ ಮದ್ದಲೆ ವಾದಕರಾಗಿ ಕಲಾ ಸೇವೆ ಮಾಡಿದ್ದಾರೆ.

1953ರಲ್ಲಿ ಜನಿಸಿದ ಅವರು ಓದಿದ್ದು ಐದನೇ ತರಗತಿ. ಸಾಗರದವರಾದ ಅವರು ಮುಂದೆ ಯಕ್ಷ ಕಲಿಕೆಗಾಗಿ ಕೋಟ ಕೇಂದ್ರ ಸೇರಿದರು. ಅಲ್ಲಿ ನಿರಂತರ ಅಭ್ಯಾಸದ ಮೂಲಕ ತಮ್ಮ ಬಾಲ್ಯದ ಬಯಕೆಯಂತೆ ಮದ್ದಲೆ ವಾದಕರಾಗಿ ತರಬೇತಿ ಪಡೆದರು. ದಿ.ನಾರ್ಣಪ್ಪ ಉಪ್ಪೂರು, ದಿ.ತಿಮ್ಮಪ್ಪ ನಾಯ್ಕರು ಜನಾರ್ಧನ ಹೆಗಡೆ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಅಭ್ಯಾಸ ಮಾಡಿಸಿದರು. ಎರಡು ವರ್ಷಗಳ ಕಾಲ ಮದ್ದಲೆವಾದನದ ಅಭ್ಯಾಸ ಮಾಡಿದ ಅವರು ಕಲಿಕೆ ಅವಧಿಯಲ್ಲಿಯೇ ವೇದಿಕೆ ಪ್ರದರ್ಶನ ನೀಡಿದರು.

ಕಲಿಕೆ ಅವಧಿಯಲ್ಲಿ ಶಂಕರ ಭಾಗವತರು, ಸುಬ್ರಾಯ ಭಂಡಾರಿ, ಗಜಾನನ ಭಂಡಾರಿ, ತ್ಯಾಗಲಿ ರಾಧಾಕೃಷ್ಣ ಭಟ್ಟ ಮುಂತಾದವರು ಹಾಡಿಕೈ ಅವರ ಸಹಪಾಠಿಗಳಾಗಿದ್ದರು. ಕಲಿಕೆಯ ನಂತರ ಅಮೃತೇಶ್ವರಿ ಮೇಳದ ಮೂಲಕ ರಂಗ ಪ್ರವೇಶ ಮಾಡಿದರು. ಒಂದು ವರ್ಷಗಳ ಕಾಲ ಮೇಳಗಳ ತಿರುಗಾಟ ಮಾಡಿದರು. ನಂತರ ಪೆರ್ಡೂರು ಮೇಳದಲ್ಲಿ ಎರಡು ವರ್ಷ, ಹಿರಿಯಡಕ ಹಾಗೂ ಇಡಗುಂಜಿ ಟೆಂಟ್ ಮೇಳದಲ್ಲಿ ಒಂದೊoದು ವರ್ಷ ಊರುರು ಸುತ್ತಿದರು. ಎಲ್ಲಾ ವೇದಿಕೆಯಲ್ಲಿಯೂ ಅವರ ಪ್ರದರ್ಶನ ಅದ್ಭುತ!

ಸಿರಿವಂತೆಯಲ್ಲಿ ಟಿ.ವಿ.ಶಿವರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕೂಟಗಳಲ್ಲಿ ಜನಾರ್ಧನ ಹೆಗಡೆ ಅವರು ಹೆಚ್ಚಿಗೆ ಭಾಗವಹಿಸಿದ್ದಾರೆ. ಸಾಗರ ಭಾಗದಲ್ಲಿ ಅನೇಕ ಸಂಘ-ಸ0ಸ್ಥೆಗಳಿoದ ನಡೆಯುತ್ತಿದ್ದ ಕಲಾ ಪ್ರದರ್ಶನಗಳಿಗೂ ಹಾಜರಿ ಹಾಕಿದ್ದಾರೆ. ಈಚಲಕೊಪ್ಪ ಪ್ರಭಾಕರ ಭಾಗ್ವತ, ಕೆ.ವಿ ಹೆಗಡೆ, ಕೆ ಜಿ ರಾಮರಾವ್, ಗುಂಡುಮನೆ ನರಸಿಂಹಯ್ಯ, ಕೆಶಿನಮನೆ ಸುಬ್ರಾಯರು, ಗುಡ್ಡೆಹಿತ್ತಲು ಸುಬ್ರಹ್ಮಣ್ಯ ಭಟ್ಟ, ಶ್ರೀನಿವಾಸರಾವ್, ನಿಟ್ಟೂರು ಅನಂತ ಹೆಗಡೆ ಮುಂತಾದ ಕಲಾವಿದರು ಹೆಗಡೆಯವರ ಒಡನಾಡಿಗಳಾಗಿದ್ದರು. ಅವರ ಮೂಲಕವೇ ಕಲೆಯಲ್ಲಿ ಬೆಳೆಯಲು ಪ್ರೋತ್ಸಾಹ ಸಿಕ್ಕಿದೆ ಎಂದವರು ಸ್ಮರಿಸುತ್ತಾರೆ.

ಕರ್ನಾಟಕ ಕಲಾ ಸನ್ನಿಧಿ, ತೆಲಂಗಾರ

  • Related Posts

    ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ

    Share this… Facebook Pinterest Twitter Linkedin Whatsappರಾಜ್ಯ ಮಟ್ಟದ ಮಲ್ಲಕಂಬ ಸ್ಪರ್ಧೆ ಹಾವೇರಿ:ಅ.13 ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ರಾಜ್ಯ ಮಟ್ಟದ 14/17 ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಮಲ್ಲಕಂಬ ಸ್ಪರ್ಧೆ ಅ.15 ಹಾಗೂ 16 ರಂದು ಶಿಗ್ಗಾಂವನ ನಾರಾಯಣಪುರ…

    ದೆಹಲಿ ಜಂತರ್ ಮಂತರ್‌ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು

    Share this… Facebook Pinterest Twitter Linkedin Whatsappದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ರಾಹುಲ್ ಗಾಂಧಿ ನೇತೃತ್ವದ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಶಾಸಕರು ಹಾವೇರಿ: ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧದ ಆರೋಪಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ…

    You cannot copy content of this page