6

ರಂಗೋಲಿ ಜಾತ್ರೆಗೆ ಜನವೋ ಜನ!

ಎಲ್ಲಾ ಕಡೆ ಜಾತ್ರೆ ಅಂದರೆ ಜನ ಜಂಗುಳಿ, ದೇವರ ಮೆರವಣಿಗೆ, ವಿಶೇಷ ಪೂಜೆ, ಆಟಿಕೆ ಸಾಮಾನುಗಳ ಆರ್ಭಟ, ತೂಗುಯ್ಯಾಲೆ, ಸರ್ಕಸ್ ಸೇರಿ ವಿವಿಧ ಮನರಂಜನೆಗಳು ಸಾಮಾನ್ಯ. ಆದರೆ, ಕಾರವಾರದ ಮಾರುತಿ ಮಂದಿರದ ಜಾತ್ರೆ ಇವೆಲ್ಲಕ್ಕಿಂತ ವಿಭಿನ್ನ. ಈ ಜಾತ್ರೆಯಲ್ಲಿ ರಂಗೋಲಿ ಚಿತ್ತಾರ ಅರಳುವುದೇ ವಿಶೇಷ!

ಶನಿವಾರ ರಾತ್ರಿ ಕಾರವಾರದ ಮಾರುತಿ ದೇವರ ಜಾತ್ರೆ ಅದ್ಧೂರಿಯಾಗಿ ನಡೆದಿದ್ದು, ಬಣ್ಣ ಬಣ್ಣದ ರಂಗೋಲಿಗಳ ಕಲರವ ಕಾಣಿಸಿತು. 200ಕ್ಕೂ ಅಧಿಕ ರಂಗೋಲಿಗಳು ಬೀದಿ ಬೀದಿಯಲ್ಲಿ ಗಮನಸೆಳೆದವು. ರಂಗೋಲಿ ನೋಡುವುದಕ್ಕಾಗಿ ಸಾವಿರಾರು ಜನ ಆಗಮಿಸಿದ್ದರು.  ಚಂದದ ರಂಗೋಲಿಗಳ ವರ್ಣನೆ. ಎಲ್ಲಿ ನೋಡಿದರೂ ರಂಗೋಲಿ ಕುರಿತಾಗಿಯೇ ಮಾತು ಕೇಳಿಸಿದವು.

ಪ್ರತಿ ವರ್ಷ ನಡೆಯುವ ಮಾರುತಿ ಗಲ್ಲಿಯ ಜಾತ್ರೆ ರಂಗೋಲಿಗಳಿಮದಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ದೇವರ ಪೂಜೆ – ವಿಧಿ ವಿಧಾನಗಳು ಉಳಿದ ಜಾತ್ರೆಗಳ ಹಾಗೇ ಇದ್ದರೂ ರಂಗೋಲಿ ಬಿಡಿಸುವಿಕೆಗೆ ಇಲ್ಲಿ ಹೆಚ್ಚಿನ ಮಹತ್ವ. ಹೀಗಾಗಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ರಂಗೋಲಿ ಬಿಡಿಸುವವರಿದ್ದಾರೆ. ಖ್ಯಾತ ಕಲಾವಿದರನ್ನು ಕರೆಯಿಸಿ ರಂಗೋಲಿ ಬಿಡಿಸಲಾಗುತ್ತದೆ.

ಜಾತ್ರೆಯಲ್ಲಿ ರಂಗೋಲಿ ಸಂಪ್ರದಾಯ ಐದು ದಶಕಗಳಿಂದ ನಡೆದು ಬಂದಿದ್ದು, ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿ-ಪ್ರಚಾರವನ್ನು ಹೆಚ್ಚಿಸಿಕೊಂಡಿದೆ. ರಂಗೋಲಿಗಳಿoದ ಕಂಗೊಳಿಸುವ ಮಾರುತಿ ಗಲ್ಲಿ, ಬ್ರಾಹ್ಮಣ ಗಲ್ಲಿ, ಹೆಸ್ಕಾಂ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಈ ವೇಳೆ ವಾಹನ ಸಂಚಾರ ನಿಷಿದ್ಧ!

ಈ ರಸ್ತೆಗಳ ಎಡುಬದಿಯಲ್ಲಿರುವ ಮನೆಯವರು ದೀಪಾಲಂಕಾರದಿoದ ಊರನ್ನು ಶೃಂಗರಿಸುತ್ತಾರೆ. ಮನೆಯ ಮುಂದೆ ಬಣ್ಣ ಬಣ್ಣದ ಪುಡಿಗಳಿಂದ ಕಲಾವಿದರ ಕಲ್ಪನೆಗೆ ತಕ್ಕಂತೆ ಕಲಾಕೃತಿಗಳು ಅರಳುತ್ತವೆ. ಏಕದಳ-ದ್ವಿದಳ ಧಾನ್ಯಗಳು, ಹೂವು ಎಲೆಗಳು, 3ಡಿ ರಂಗೋಲಿಗಳನ್ನು ಚಿತ್ರಿಸಿದ್ದರು. ಹಣ್ಣು ತರಕಾರಿ, ಉಪ್ಪು ಮತ್ತು ಬಣ್ಣ ಬಣ್ಣದ ಪುಡಿಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಶೈಲಿಯ ಚುಕ್ಕಿ ರಂಗೋಲಿಗಳು ಅಲ್ಲಿದ್ದವರು.

ವ್ಯಕ್ತಿ ಚಿತ್ರಣಗಳು, ಪ್ರಸ್ತುತ ವಿದ್ಯಮಾನಗಳ ಬಗ್ಗೆಯೂ ರಂಗೋಲಿಗಳು ಸಾರಿದವು. ಬೇರೆ ಬೇರೆ ಭಾಗದ ಕಲಾವಿದರು ಆಗಮಿಸಿ ರಂಗೋಲಿ ಬಿಡಿದರು. ಅನೇಕ ಮನೆಯವರು ತಮ್ಮ ಮನೆ ಮುಂದೆ ಖ್ಯಾತ ಕಲಾವಿದರನ್ನು ಕರೆಯಿಸಿ ಕಲಾವಿದರ ಚಿತ್ರ ಬಿಡಿಸಿದರು.

  • Related Posts

    ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ

    Share this… Facebook Pinterest Twitter Linkedin Whatsappರಾಜ್ಯ ಮಟ್ಟದ ಮಲ್ಲಕಂಬ ಸ್ಪರ್ಧೆ ಹಾವೇರಿ:ಅ.13 ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ರಾಜ್ಯ ಮಟ್ಟದ 14/17 ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಮಲ್ಲಕಂಬ ಸ್ಪರ್ಧೆ ಅ.15 ಹಾಗೂ 16 ರಂದು ಶಿಗ್ಗಾಂವನ ನಾರಾಯಣಪುರ…

    ದೆಹಲಿ ಜಂತರ್ ಮಂತರ್‌ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು

    Share this… Facebook Pinterest Twitter Linkedin Whatsappದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ರಾಹುಲ್ ಗಾಂಧಿ ನೇತೃತ್ವದ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಶಾಸಕರು ಹಾವೇರಿ: ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧದ ಆರೋಪಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ…

    You cannot copy content of this page