6

ಬೆಂಗಳೂರಿಗೆ ಬರುವ ನಾಯಕರಿಗೆ ಗ್ರೀನ್ ಕಾರ್ಡ!

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನ 21ರಂದು ಬೆಂಗಳೂರಿನಲ್ಲಿ ಜಾಥಾ ಆಯೋಜಿಸಿದ್ದು, ಅದರ ಅಂಗವಾಗಿ ಎಲ್ಲಡೆ ಪೂರ್ವಭಾವಿ ಸಭೆ ಮುಂದುರೆದಿದೆ. ಗುರುವಾರ ಸಂಘಟನೆ ಸದಸ್ಯರಿಗೆ ಗುರುತು ಪತ್ರ ಹಾಗೂ ಮುಖಂಡರಿಗೆ ರವೀಂದ್ರ ನಾಯ್ಕ ಗ್ರೀನ್ ಕಾರ್ಡ ವಿತರಿಸಿದ್ದಾರೆ.

`ಅರಣ್ಯವಾಸಿಗಳ ಸಮಸ್ಯೆಗೆ ಸಕರಾತ್ಮಕ ಸ್ಪಂಧಿಸುವ ಮತ್ತು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಎಂಬ ಹಿನ್ನಲೆ ಈ ಜಾಥಾ ಸಂಘಟಿಸಲಾಗಿದೆ. ಗ್ರಾಮಮಟ್ಟದಲ್ಲಿ ಅರಣ್ಯವಾಸಿಗಳ ಜಾಗೃತ ಸಭೆ ನಡೆಯುತ್ತಿದೆ’ ಎಂದವರು ಹೇಳಿದರು.

ಈ ಸಭೆಯಲ್ಲಿ ಆರ್.ಎಚ್ ನಾಯ್ಕ ಜನಕಡಗಲ್, ಸಂಚಾಲಕ ಪಿಲ್ಲೆ ಅಂಕೋಲಾ, ನಾಗರಾಜ ಮಂಜುನಾಥ ನಾಯ್ಕ, ಬೆಳ್ಳ ಗೌಡ, ಗುರುಕೃಷ್ಣ ಹರಿಕ್ರಂತ ಅಂಕೋಲಾ, ಗಣಪತಿ ಪರಮೇಶ್ವರ ನಾಯ್ಕ, ರಾಮ ಬಂರ‍್ಯ ನಾಯ್ಕ, ಈರಾ ಗೌಡ ನೀರ್‌ಗಾನ್, ನಾಗವೇಣಿ ವಿ. ಗೌಡ, ಮಂಜುನಾಥ ನಾಗಾ ಜೋಗಿ, ನೇತ್ರಾವತಿ ಮರಿಯಾ ಗೌಡ ದೇವನಳ್ಳಿ ಉಪಸ್ಥಿತರಿದ್ದರು.

150 ಕ್ಕೂ ಮಿಕ್ಕಿ ಸಭೆ:
`ಬೆಂಗಳೂರು ಚಲೋಗೆ ಸಂಬoಧಿಸಿ ಪೂರ್ವಭಾವಿಯಾಗಿ ರಾಜ್ಯಾದಂತ 150 ಸಭೆಗಳನ್ನು ಮಾಡಲಾಗುತ್ತದೆ. ನಂತರ ರಾಜಧಾನಿಯಲ್ಲಿ ಸಂಘಟನೆಯ ಶಕ್ತಿ ಪ್ರದರ್ಶನ ಮಾಡಲಾಗುವುದು’ ಎಂದರು.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page