6

ನಿವೃತ್ತ ನೌಕರನ ತಲೆ ಒಡೆದ ಸರ್ಕಾರಿ ಬಸ್ ಚಾಲಕ!

ಕುಮಟಾ: ದಿವಿಗಿಯಿಂದ ಕುಮಟಾ ಕಡೆ ವೇಗವಾಗಿ ಬಸ್ಸು ಓಡಿಸಿಕೊಂಡು ಬಂದ ಕೆ ರವಿಕುಮಾರ್ ಕಟ್ಟಪ್ಪನ್ ನಿವೃತ್ತ ನೌಕರ ನಾಗು ಮುಕ್ರಿ ಅವರಿಗೆ ಸರ್ಕಾರಿ ವಾಹನ ಗುದ್ದಿದ್ದರಿಂದ ನಾಗು ಮುಕ್ರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಧಾರೇಶ್ವರದ ಬೆಲೆಮಠದವರಾಗಿದ್ದ ನಾಗು ಬಾಳಾ ಮುಕ್ರಿ (68) ಕುಮಟಾ ಹೆಗಡೆಯ ಗುನಗಕೊಪ್ಪದ ಬಳಿ ವಾಸವಾಗಿದ್ದರು. ನಿವೃತ್ತಿ ನಂತರ ಅವರು ನೆಮ್ಮದಿಯ ಬದುಕು ಸಾಗಿಸುತ್ತಿದ್ದರು. ನ 9ರಂದು ರಾತ್ರಿ 8.15ರ ವೇಳೆಗೆ ಕುಮಟಾ ಮಣಕಿ ಗಾಂಧಿ ನಗರದ ಬಳಿ ಅವರು ನಡೆದು ಹೋಗುತ್ತಿದ್ದರು. ರಾಮಲೀಲ್ಲಾ ಆಸ್ಪತ್ರೆ ಮುಂದೆ ಅವರಿಗೆ ಕೆಎಸ್‌ಆರ್‌ಟಿಸಿ ಬಸ್ಸು ಗುದ್ದಿತು.

ಬಸ್ಸು ಗುದ್ದಿದ ರಭಸಕ್ಕೆ ಅವರು ತಲೆ ಎರಡು ಹೋಳಾಯಿತು. ಕಾಲು ಸಹ ಗಾಯಗೊಂಡಿತು. ಅವರು ಅಲ್ಲಿಯೇ ಕೊನೆ ಉಸಿರೆಳೆದರು. ಶಿವಮೊಗ್ಗದ ಬಸ್ಸು ಚಾಲಕ ಕೆ ರವಿಕುಮಾರ್ ಕಟ್ಟಪ್ಪನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಪಿಎಸ್‌ಐ ರವಿ ಗುಡ್ಡಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page