6

ಪ್ರತಿಭಾನ್ವಿತರಿಗೆ ಗೌರವಿಸಿದ ಗೋಮಾಂತಕ ಸಮಾಜ

ಯಲ್ಲಾಪುರ: ಹುಬ್ಬಳ್ಳಿಯ ಉತ್ತರ ಕನ್ನಡ ವೈಶ್ಯ ಸಮಾಜ ಭವನದಲ್ಲಿ ನಡೆದ ಗೊಮಾಂತಕ ಸಮಾಜ ಸೇವಾ ಸಂಘದ ವಾರ್ಷಿಕ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ ಪ್ರತಿಭೆಗಳಿಗೆ ಸನ್ಮಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದವರನ್ನು ಗೊಮಾಂತಕ ಸಮಾಜ ಗುರುತಿಸಿ ಗೌರವಿಸಿದೆ.

ಕಳೆದ 40 ವರ್ಷಗಳಿಂದ ಗೊಮಾಂತಕ ಸಮಾಜ ಸೇವಾ ಸಂಘ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಈವರೆಗೆ 7ಲಕ್ಷಕ್ಕೂ ಅಧಿಕ ಹಣವನ್ನು ವಿದ್ಯಾ ಪುರಸ್ಕಾರದ ರೂಪದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿದೆ. ಈ ಬಗ್ಗೆ ಸಭೆಗೆ ಸಂಘದ ಕಾರ್ಯದರ್ಶಿ ಚಂದ್ರಕಾ0ತ ಫಾತಾರಪೆಕರ್ ಅವರು ಮಾಹಿತಿ ನೀಡಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಯಲ್ಲಾಪುರದ ಅರುಣ್ ಉಮೇಶ್ ಬಾಂದೇಕರ್, ಗಣೇಶ್ ಕಿರಣ್ ಬಾಂದೇಕರ್, ರಕ್ಷಿತಾ ವಿಜಯಾನಂದ್ ಅಂಕೋಲೇಕರ್, ಶಿವಾನಿ ವಿನಾಯಕ ಬಾಂದೇಕರ್, ಅರುಣ್ ಉಮೇಶ್ ಬಾಂದೇಕರ್, ಕಾರವಾರದ ತನ್ವಿ ನಿಖಿಲ್ ಕಡವಾಡಕರ್, ನೇಹಾ ನವೀನ್ ಬಡ್ಕರ್, ಅಂಕೋಲಾದ ಪ್ರಥಮೇಶ್ ರಾಜಾ ಬಾಂದೇಕರ್, ಓಂಕಾರ್ ಸುನಿಲ್ ಬಾನವಲಿ, ಪ್ರೇಮ ಪ್ರಕಾಶ್ ದೇವಲಿ, ಆರ್ಯಮನ್ ರಾಹುಲ್ ಬಾಂದೇಕರ್, ಮಾನಸಿ ಗಿರೀಶ್ ಜಾಂಬಾವಳಿಕರ್, ಅಕ್ಷಂಬರ್ ಸಂಜಯ್ ಅಜದೀಪಕರ್, ಶಿರಸಿಯ ಶಿವಾನಿ ವಿವೇಕ್ ಸಿರ್ಸಿಕರ್ ಸನ್ಮಾನ ಸ್ವೀಕರಿಸಿದರು.

ಗೋವಾದ ಗೊಮಾಂತಕ ಮರಾಠ ಸಮಾಜದ ಕಾರ್ಯದರ್ಶಿ ಉತ್ಕರ್ಷ ಉಮೇಶ್ ಬಾನಸ್ತರಕರ ಕಾರ್ಯಕ್ರಮ ಉದ್ಘಟಿಸಿದರು. ಕೃಷ್ಣಕಾಂತ ಅಂಕೋಲೆಕರ ಅವರು ಸಭೆಯ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ಗಜಾನನ ಹೊನ್ನಾವರ, ರಾಜು ಭಟ್ಕಳ, ಪ್ರಭಾಕರ್ ಮಾಂಡ್ರೆಕರ, ಅನುರಾಧ ಚಂದಾವರಕರ, ಶುಭಾ ಗಜಾನನ ಕುಮಟಾಕರ ವೇದಿಕೆಯಲ್ಲಿದ್ದರು. ಹಿರಿಯ ನಾಗರಿಕರನ್ನು ಸಹ ಈ ವೇದಿಕೆಯಲ್ಲಿ ಗೌರವಿಸಲಾಯಿತು.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page