6

ಆಳ ಸಮುದ್ರದಲ್ಲಿ ಮುಳುಗಿದ ಯಾಂತ್ರಿಕೃತ ಬೋಟು: ಮಲ್ಪೆ ಮೀನುಗಾರರಿಗೆ ಬೈತಖೋಲ್ ಮೀನುಗಾರರ ಶ್ರೀರಕ್ಷೆ!

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆ ಬೋಟು ಅಪಾಯಕ್ಕೆ ಸಿಲುಕಿದನ್ನು ಅರಿತ ಇಲ್ಲಿನ ಮೀನುಗಾರರು ಆ ಬೋಟಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.

ಮಂಗಳವಾರ ಆಳ ಸಮುದ್ರದಲ್ಲಿ ಸಂಚರಿಸುತ್ತಿದ್ದ ಮಲ್ಪೆಯ `ಸೀ ಹಂಟರ್’ ಎಂಬ ಬೋಟು ಸಂಚರಿಸುತ್ತಿತ್ತು. ಮಲ್ಪೆಯಿಂದ ಮಹಾರಾಷ್ಟçದ ಕಡೆ ಹೊರಟಿದ್ದ ಈ ಬೋಟು ಕಾರವಾರದಿಂದ 9 ನಾಟಿಕಲ್ ಮೀಲು ದೂರದಲ್ಲಿ ಅಪಘಾತಕ್ಕೆ ಒಳಗಾಯಿತು. ಈ ಬೋಟಿನ ಕಬ್ಬಿಣದ ವೆಲ್ಟಿಂಗ್ ತಪ್ಪಿತು. ಇದರಿಂದ ಆ ಬೋಟಿನ ಒಳಗೆ ನೀರು ನುಗ್ಗಲು ಶುರುವಾಯಿತು. ಬೋಟು ಸಹ ನೀರಿನ ಬಾರಕ್ಕೆ ಮುಳುಗಡೆಯಾಯಿತು.

ಲೈಟ್ ಹೌಸಿನ ಬಳಿ ಆ ಬೋಟಿನಲ್ಲಿದ್ದ ಎಂಟು ಕಾರ್ಮಿಕರನ್ನು ಸ್ಥಳೀಯ ಮೀನುಗಾರರು ತಮ್ಮ ಬೋಟಿಗೆ ಹತ್ತಿಸಿಕೊಂಡರು. ನಂತರ ಆ ಮೀನುಗಾರರನ್ನು ಬೈತಖೋಲ್ ಬಂದರಿಗೆ ಕರೆತಂದು ಉಪಚರಿಸಿದರು. ಮುಳುಗುತ್ತಿದ್ದ ಬೋಟನ್ನು ಮೇಲೆತ್ತುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಬೋಟ್ ಮುಳುಗಡೆಯಿಂದ ಮಾಲಕರಿಗೆ ಕೋಟಿ ರೂ ನಷ್ಟವಾಗಿದೆ.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page