6

ನಡುಗಡ್ಡೆಯಲ್ಲಿ ನಡುಗಿದ ಜೊಯಿಡಾ ಜನ!

ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಜೊಯಿಡಾದ ಅಪ್ಪರ ಕಾನೇರಿ ಜಲಾಶಯದ ಹಿನ್ನೀರಿನಲ್ಲಿ ಬರುವ 6 ಗ್ರಾಮದ 113 ಕುಟುಂಬದವರು ಅತಂತ್ರರಾಗಿದ್ದಾರೆ. ಇಲ್ಲಿನ 565 ಜನ ನಡುಗಡ್ಡೆಯಲ್ಲಿ ಸಿಲುಕಿದ್ದು, ಪ್ರಸ್ತುತ ಕಲೋಲಿ ಗ್ರಾಮದವರ ಅನುಕೂಲಕ್ಕೆ ಒಂದು ದೋಣಿ ವ್ಯವಸ್ಥೆ ಮಾಡಲಾಗಿದೆ. ಉಳಿದ ನಾಲ್ಕು ಗ್ರಾಮದವರು ಗಾಳಿ-ಮಳೆ-ಚಳಿಗೆ ನಡುಗಿದ್ದಾರೆ.
ಕಾಳಿ ಯೋಜನೆಯ ಮೊದಲ ಹಂತದಲ್ಲಿ ನಿರ್ಮಾಣವಾದ ಅಪ್ಪರ್ ಕಾನೇರಿ ಜಲಾಶಯ ಪ್ರದೇಶದಲ್ಲಿ 185 ಮಿ.ಮೀ ಮಳೆ ದಾಖಲಾಗಿದೆ. ಕಾನೇರಿ, ಆದಗವ, ಕೆಲೋಲಿ, ಕುಂಡಲ, ಕುಮಗಾಳ ನದಿಗಳು ಉಕ್ಕಿ ಹರಿದಿವೆ. ಜಲಾಶಯಕ್ಕೆ ಒಳ ಹರಿವು ಪ್ರಮಾಣ ಹೆಚ್ಚಳವಾಗಿದ್ದು, ಜಲಾಶಯದ ಹಿನ್ನೀರಿನಲ್ಲಿ ಬರುವ ಗ್ರಾಮವಾದ ಕುಂಡಲ, ಕುರಾವಲಿ, ಕೆಲೋಲಿ, ಆದಗೋವ, ಘಟ್ಟಾವ, ದೇವಸ್‌ನವರ ಗ್ರಾಮಸ್ಥರ ಸಂಪರ್ಕ ಕಡಿತವಾಗಿದೆ.
ಕುಂಡಲ ಸೇತುವೆ ಮತ್ತು ಕೇಲೋಲಿ ಗ್ರಾಮದ ಸಂಪರ್ಕಕೊoಡಿಯಾದ ಕಾಲು ಸೇತುವೆ ಮುಳುಗಿದೆ. ಇದರಿಂದ ಕೇಲೋಲಿ ಗ್ರಾಮದ 35 ಕುಟುಂಬದ 155 ಜನ ನಡುಗಡ್ಡೆಯಲ್ಲಿದ್ದಾರೆ. ಕುಂಡಲ್ ಗ್ರಾಮದ 40 ಮನೆಗಳ 200 ಜನ, ಕುರಾವಳಿ ಗ್ರಾಮದಲ್ಲಿ 18 ಮನೆಗಳ 90 ಜನ, ಘಟ್ಟಾವ ಗ್ರಾಮದ 10 ಮನೆಗಳ 75 ಜನ, ನವರ ಗ್ರಾಮದ 10 ಮನೆಗಳಲ್ಲಿನ 60 ಜನ ನೀರ ನಡುವೆ ಸಿಲುಕಿಕೊಂಡಿದ್ದಾರೆ.

 

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    Leave a Reply

    Your email address will not be published. Required fields are marked *

    You cannot copy content of this page