6

ಅಲ್ಲಿ ಸೂತಕ.. ಇಲ್ಲಿ ಸಡಗರ!

ಗುಡ್ಡ ಕುಸಿತ ಪ್ರಕರಣದ ವೀಕ್ಷಣೆಗೆ ಅಂಕೋಲಾದ ಶಿರೂರಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ್ದು, ದಾರಿ ಮದ್ಯೆ ಅನೇಕರು ಪಟಾಕಿ ಹೊಡೆದು ಅವರನ್ನು ಸ್ವಾಗತಿಸಿದರು.
ಹುಬ್ಬಳ್ಳಿಯಿಂದ ಹೆದ್ದಾರಿ ಮೂಲಕ ಅವರು ಅಂಕೋಲಾಗೆ ಆಗಮಿಸಿದ್ದು, ದಾರಿ ಉದ್ದಕ್ಕೂ ಅವರ ಬೆಂಬಲಿಗರು ಕಾಯುತ್ತಿದ್ದರು. ಜೆಡಿಎಸ್ ಹಾಗೂ ಬಿಜೆಪಿಯ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಈ ಸಡಗರದಲ್ಲಿ ಭಾಗಿಯಾಗಿದ್ದರು. ಅಲ್ಲಲ್ಲಿ ಹೆದ್ದಾರಿ ಮೇಲೆ ನಿಂತಿದ್ದ ಜನ ಕುಮಾರಸ್ವಾಮಿ ಅವರ ಕಾರು ತಡೆದು ಶಾಲು ಹೊದೆಸಿ ಗೌರವಿಸಿದರು.
ಶಿರಸಿ, ಕುಮಟಾ ಭಾಗದವರು ಹಾಗೂ ಇತರೆ ತಾಲೂಕಿನ ಜನ ಸಹ ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಗೆ ಆಗಮಿಸಿ ಕುಮಾರಸ್ವಾಮಿ’ಯವರಿಗೆ ಹೂಮಾಲೆ ಹಾಕಿದರು. ಅವಘಡದ ಸನ್ನಿವೇಶ ವೀಕ್ಷಣೆಗೆ ಆಗಮಿಸಿದವರಿಗೆ ಅದ್ಧೂರಿ ಸ್ವಾಗತ ಕೋರಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿದೆ.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    Leave a Reply

    Your email address will not be published. Required fields are marked *

    You cannot copy content of this page