6

ಸಿಬ್ಬಂದಿ ಮನದಾಳ ಅರಿತ ವರಿಷ್ಠಾಧಿಕಾರಿ: ಪೊಲೀಸ್ ಗೃಹಭಾಗ್ಯಕ್ಕೆ ಕೂಡಿಬಂದ ಮುಹೂರ್ತ

ಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದ್ದು, ಇದೀಗ ಅದನ್ನು ಪೊಲೀಸರಿಗೆ ಹಸ್ತಾಂತರ ಮಾಡಲು ಮುಹೂರ್ತ ಕೂಡಿಬಂದಿದೆ.
ಚುನಾವಣೆ ನೀತಿ ಸಂಹಿತೆ, ಇಲಾಖೆಗೆ ಕಟ್ಟಡ ಹಸ್ತಾಂತರ, ಅಧಿಕಾರಿಗಳ ವರ್ಗಾವಣೆ ಹಾಗೂ ವಿವಿಧ ಸಣ್ಣಪುಟ್ಟ ಕಾರಣಗಳ ಹಿನ್ನಲೆ ಗುತ್ತಿಗೆದಾರರು ಕಟ್ಟಡ ಕೆಲಸ ಮುಗಿಸಿ ಒಂದುವರೆ ವರ್ಷ ಕಳೆದರೂ ಪೊಲೀಸರಿಗೆ ಈ ಮನೆ ದೊರೆತಿರಲಿಲ್ಲ. ಜನರಿಗೆ ನ್ಯಾಯ ಕೊಡಿಸುವ ಪೊಲೀಸರಿಗೆ ಅನ್ಯಾಯವಾಗಿರುವ ಬಗ್ಗೆ ಜೂನ್ 28ರಂದು `ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!’ ಎಂಬ ಶಿರ್ಷಿಕೆ ಅಡಿ S News ಡಿಜಿಟಲ್ ವರದಿ ಪ್ರಸಾರ ಮಾಡಿತ್ತು.
ಅದಾಗಿ ಎರಡು ದಿನದಲ್ಲಿ ಅಧಿಕಾರ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಪೊಲೀಸರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ್ದರು. ದುಬಾರಿ ಮನೆ ಬಾಡಿಗೆಯಿಂದ ಪೊಲೀಸ್ ಸಿಬ್ಬಂದಿ ಜೀವನ ನಡೆಸುತ್ತಿರುವುದು ಕಷ್ಟ ಎಂದು ಅರಿತು ಅದಕ್ಕಿರುವ ಎಲ್ಲಾ ತೊಡಕುಗಳನ್ನು ನಿವಾರಿಸಿದರು. ಅದರ ಪರಿಣಾಮವಾಗಿ ಇದೀಗ ಅರ್ಹರಿಗೆ ಮನೆ ಹಂಚಿಕೆ ಆಗಲಿದೆ.. ಈ ಕಟ್ಟಡದಲ್ಲಿರುವ ಪ್ರತಿ ಮನೆಯೂ ಡಬಲ್ ಬೆಡ್ ರೂಂ ಹೊಂದಿದೆ. ಪ್ರತ್ಯೇಕ ಅಡುಗೆಮನೆ, ಹಾಲ್, ಸ್ನಾನ ಹಾಗೂ ಶೌಚಾಲಯಗಳಿವೆ. ಪೊಲೀಸರ ಮೂಲ ವೇತನದಲ್ಲಿ ಪ್ರತಿ ತಿಂಗಳು ಶೇ 10ರಷ್ಟು ಕಡಿತಗೊಳಿಸಿ ಈ ಮನೆಗಳನ್ನು ಅವರಿಗೆ ನೀಡಲಾಗುತ್ತಿದ್ದು, ಇದರಿಂದ ಸರ್ಕಾರಿ ಬೊಕ್ಕಸಕ್ಕೂ ಆದಾಯ ಬರಲಿದೆ.

ಜೂನ್ 28ರಂದು ಪ್ರಕಟವಾಗಿದ್ದ `ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!’ ವರದಿಯನ್ನು ಇಲ್ಲಿ ಓದಿ..

ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    Leave a Reply

    Your email address will not be published. Required fields are marked *

    You cannot copy content of this page