6

ಅರಣ್ಯ ಒತ್ತುವರಿ ತೆರವಿಗೆ ಖಡಕ್ ಆದೇಶ: ಅತಿಕ್ರಮಣ ತೋಟ – ರೆಸಾರ್ಟ ಮಾಲಕರಿಗೆ ನಡುಕ!

ಶಿರೂರು ಗುಡ್ಡ ಕುಸಿತದ ಕಾರಣ ಉಲ್ಲೇಖಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅಗಸ್ಟ 2ರಂದು ಆದೇಶವೊಂದನ್ನು ಹೊರಡಿಸಿದ್ದು, 2015ರ ನಂತರ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿದ ಎಲ್ಲಾ ತೋಟ, ರೆಸಾರ್ಟ, ಬಡಾವಣೆಗಳನ್ನು ತೆರವು ಮಾಡುವಂತೆ ಸೂಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯನ್ನು ಸೇರಿ ರಾಜ್ಯದ 9 ಜಿಲ್ಲೆಗಳ ಹೆಸರು ಉಲ್ಲೇಖಿಸಿ ಈ ಆದೇಶ ಹೊರಡಿಸಿದ್ದಾರೆ. `ಶಿರೂರು ಹಾಗೂ ಕೇರಳದಲ್ಲಿ ನಡೆದ ಅವಘಡ ಎಚ್ಚರಿಕೆಯ ಗಂಟೆಯಾಗಿದ್ದು, ಸ್ವಾಭಾವಿಕ ಹಾಗೂ ಪ್ರಕೃತಿದತ್ತವಾದ ಪಶ್ಚಿಮಘಟ್ಟದ ಗುಡ್ಡಗಳನ್ನು ಕಡಿದಿರುವುದೇ ಈ ಅವಾಂತರಗಳಿಗೆ ಕಾರಣ. ಅರಣ್ಯಗಳನ್ನು ನಾಶಮಾಡಿ ಮನೆ, ರೆಸಾರ್ಟ, ತೋಟ ಮಾಡುತ್ತಿರುವ ಪರಿಣಾಮ ಬೇರಿನಿಂದ ಗಟ್ಟಿಯಾಗಿ ಹಿಡಿದಿದ್ದ ಮಣ್ಣು ಸಡಿಲಗೊಂಡಿದ್ದು, ಬೃಹತ್ ಮರಗಳ ಕಡಿತಲೆ, ಅವೈಜ್ಞಾನಿಕ ಗುಡ್ಡ ಕತ್ತರಿಸುವಿಕೆಯಿಂದ ದುರಂತ ಮರುಕಳಿಸುತ್ತಿದೆ’ ಎಂದು ತಜ್ಞರು ನೀಡಿರುವ ವರದಿಯನ್ನು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
2015ರ ನಂತರ ಪಶ್ಚಿಮಘಟ್ಟದಲ್ಲಿ ನಡೆದ ಎಲ್ಲಾ ಅರಣ್ಯ ಒತ್ತುವರಿಯನ್ನು ಇನ್ನೂ 1 ತಿಂಗಳ ಒಳಗಾಗಿ ತೆರವು ಮಾಡಿ, ವರದಿ ಸಲ್ಲಿಸುವಂತೆ ಅವರು ಅರಣ್ಯ ಜೀವಶಾಸ್ತ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    Leave a Reply

    Your email address will not be published. Required fields are marked *

    You cannot copy content of this page