ಮಹಾರಾಷ್ಟದ ಉಗ್ರ ನಿಗ್ರಹ ಪಡೆ ಭಟ್ಕಳಕ್ಕೆ ಆಗಮಿಸಿದ್ದು, ಶಂಕಿತ ಉಗ್ರನ ಹುಡುಕಾಟ ಶುರು ಮಾಡಿದೆ. ಅಬ್ದುಲ್ ಕಬೀರ ಸುಲ್ತಾನ ಎಂಬಾತನನ್ನು ಹುಡುಕಿಕೊಡುವಂತೆ ಅವರು ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದಾರೆ. ಜೊತೆಗೆ ಉಗ್ರ ಸಂಘಟನೆಗಳ ಜೊತೆ ಸಂಬoಧ ಹೊಂದಿದ್ದಾನೆ ಎನ್ನಲಾದ ವ್ಯಕ್ತಿಯ ಮನೆ ಬಾಗಿಲಿಗೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ.
ಭಟ್ಕಳದ ನವಾಯಿತ್ ಕಾಲೋನಿಯ ಅಬ್ದುಲ್ ಕಬೀರ್ ಮುಂಬೈನಲ್ಲಿ ವಾಸವಾಗಿದ್ದ. ಅಲ್ಲಿ ಆತನ ವಿರುದ್ಧ ದೇಶ ವಿರೋಧಿ ಕೃತ್ಯದ ವಿಚಾರಣೆ ನಡೆಯುತ್ತಿತ್ತು. ನ್ಯಾಯಾಲಯದಿಂದ ವಾರೆಂಟ್ ಪಡೆದ ಅಲ್ಲಿನ ಅಧಿಕಾರಿಗಳು ಆತನ ಹುಡುಕಾಟಕ್ಕಾಗಿ ಭಟ್ಕಳಕ್ಕೆ ಬಂದಿದ್ದಾರೆ.
Discussion about this post