ದಾಂಡೇಲಿ ಗಾಂಧೀನಗರದ ಚಾಲಕ ರಾಜೇಶ ಲಮಾಣಿ ಅವರ ಶವ ಮೌಳಂಗಿ ಭರ್ಜಿ ನಾಲಾದಲ್ಲಿ ಸಿಕ್ಕಿದೆ. ಅವರ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.
ಗಾಂಧೀನಗರ ಹಿಟ್ಟಿನಗಿರಣಿ ಬಳಿ ರಾಜೇಶ ಲಮಾಣಿ (33) ವಾಸವಾಗಿದ್ದರು. ಅತಿಯಾದ ಸರಾಯಿ ಕುಡಿಯುವುದನ್ನು ರೂಡಿಸಿಕೊಂಡಿದ್ದ ಅವರಿಗೆ ಪಿಡ್ಸ ರೋಗವೂ ಅಂಟಿಕೊoಡಿತ್ತು. ರಾಜೇಶ ಲಮಾಣಿ ವರ್ತನೆಯಿಂದ ಬೇಸತ್ತ ಅವರ ಪತ್ನಿ ಸಹ ಬಿಟ್ಟು ಹೋಗಿದ್ದರು.
ಫೆ 27ರಂದು ಮಧ್ಯಾಹ್ನ 4 ಗಂಟೆ ನಂತರ ರಾಜೇಶ ಲಮಾಣಿ ಕಾಣೆಯಾಗಿದ್ದರು. ಫೆ 28ರಂದು ಮೌಳಂಗಿ ಭರ್ಜಿ ನಾಲಾದಲ್ಲಿ ಅವರ ಶವ ಕಾಣಿಸಿತು. ಪಿಡ್ಸ್ ರೋಗದಿಂದ ಅವರು ನೀರಿಗೆ ಬಿದ್ದು ಸಾವನಪ್ಪಿರುವ ಅನುಮಾನವಿದೆ. ಜೀವನ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಹೇಳಲಾಗಿದೆ.
ಈ ಬಗ್ಗೆ ರಾಜೇಶ ಅವರ ಸಹೋದರ ಮಂಜುನಾಥ ಲಮಾಣಿ ಪೊಲೀಸರಿಗೆ ವರದಿ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ.