ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕವು ಮಾರ್ಚ್ 9ರಂದು ಬೆಳಿಗ್ಗೆ 6 ಗಂಟೆಗೆ ಕಾರವಾರ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ `ಕರ್ನಾಟಕ ಪೊಲೀಸ್ ರನ್-2025’ರ ಮ್ಯಾರಥಾನ್ ಓಟ ಆಯೋಜಿಸಿದೆ.
`ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ’ದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಈ ಜಾಥಾ ಆಯೋಜಿಸಲಾಗಿದೆ. ಈ ಓಟದಲ್ಲಿ ಜೋರಾಗಿ ಓಡಿದ ಮೊದಲ ಮೂವರಿಗೆ ಬಹುಮಾನಗಳಿವೆ. ಅವರಿಗೆ ಆಕರ್ಷಕ ನಗದು ಬಹುಮಾನ, ಪದಕ ಹಾಗೂ ಪ್ರಶಸ್ತಿ ಪತ್ರ ಸಿಗಲಿದೆ.
`ಪೊಲೀಸ್ ರನ್ -2025ರ ಮ್ಯಾರಾಥಾನ್ 5ಕೆ’ ಓಟಕ್ಕೆ ಸಾರ್ವðಜನಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರುಗಳನ್ನು ನೊಂದಾಯಿಸಬಹುದು. `ಮ್ಯಾರಾಥಾನ್ ಮುಗಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ಹಾಗೂ ಪದಕವನ್ನು ನೀಡಲಾಗುತ್ತದೆ’ ಎಂದು ಪೊಲೀಸ್ ಅಧೀಕ್ಷಕ ನಾರಾಯಣ ಎಂ ತಿಳಿಸಿದ್ದಾರೆ.