ಕಾರವಾರ ನಗರದಲ್ಲಿ ಎರಡು ದಿನಗಳಿಂದ ವ್ಯಾಪಕ ಪ್ರಮಾಣದಲ್ಲಿ ಬಿಸಿಲು ಕಾಡುತ್ತಿದೆ. ಸಾವಂತವಾಡದಲ್ಲಿ ಮಾ 11 ಹಾಗೂ 12ರಂದು 42.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಈ ಪ್ರಮಾಣದ ಬಿಸಿಲು ಬೀದರ್-ಬಾಗಲಕೋಟೆ ಭಾಗದಲ್ಲಿ ಸಹ ಇಲ್ಲ. ಹೀಗಾಗಿ ಈ ಎರಡು ದಿನದ ಅವಧಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನ ಕಾರವಾರದಲ್ಲಿ ದಾಖಲಾದಂತಾಗಿದೆ.
ಇದೇ ಅವಧಿಯಲ್ಲಿ ಕಾರವಾರ ತಾಲೂಕಿನ ಕಿನ್ನರದಲ್ಲಿ 41.8, ಕುಮಟಾ ತಾಲೂಕಿನ ಮಿರ್ಜಾನನಲ್ಲಿ 40.7, ಮುಂಡಗೋಡ ತಾಲೂಕಿನ ಪಾಳಾದಲ್ಲಿ 40, ಅಂಕೋಲಾದಲ್ಲಿ 40.5, ಅವರ್ಸಾದಲ್ಲಿ 40.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.