ಗೋಕರ್ಣದ ನಾಗು ಗೌಡ ಹಾಗೂ ಶಂಕರ್ ಗೌಡ ಗಾಂಜಾ ಸೇದಿ ಸಿಕ್ಕಿ ಬಿದ್ದಿದ್ದಾರೆ. ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಗೋಕರ್ಣದ ದಂಡೆಭಾಗ ಬೇಲೆಹಿತ್ತಲಿನ ನಾಗು ಗೌಡ ಕೂಲಿ ಕೆಲಸ ಮಾಡಿಕೊಂಡಿದ್ದರು. ಸಿಕ್ಕ ಕಾಸಿನಲ್ಲಿ ಗಾಂಜಾ ಖರೀದಿಸಿದ ಅವರು ಮೇ 5ರಂದು ಅದನ್ನು ಸೇವಿಸಿ ಪಿಎಸ್‌ಐ ಖಾದರ್ ಭಾಷಾ ಬಳಿ ಸಿಕ್ಕಿ ಬಿದ್ದರು. ಬಂಗ್ಲೆಗುಡ್ಡ ಪ್ರವಾಸಿ ಮಂದಿರ ರಸ್ತೆ ಬಳಿ ತೂರಾಡುತ್ತಿದ್ದ ನಾಗು ಗೌಡರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದರು. ಆಗ, ನಾಗು ಗೌಡ ಅಪಾರ ಪ್ರಮಾಣದಲ್ಲಿ ಗಾಂಜಾ ಸೇವಿಸಿರುವುದು ದೃಢವಾಯಿತು.
ಗೋಕರ್ಣ ಮೀನು ಮಾರುಕಟ್ಟೆ ಬಳಿಯ ಶಂಕರ ಗೌಡ ಸಹ ಬಂಗ್ಲೆಗುಡ್ಡೆ ಪ್ರವಾಸಿ ಮಂದಿರದ ಬಳಿ ತೂರಾಡುತ್ತಿದ್ದರು. ಪೆಂಟಿAಗ್ ಕೆಲಸ ಮಾಡಿಕೊಂಡಿದ್ದ ಶಂಕರ್ ಗೌಡ ಈ ದಿನ ನಶೆಯಲ್ಲಿರುವಾಗಲೇ ಪೊಲೀಸರ ಬಳಿ ಸಿಕ್ಕಿ ಬಿದ್ದರು. ಪಿಎಸ್‌ಐ ಖಾದರ್ ಭಾಷಾ ಅವರು ಶಂಕರ್ ಗೌಡರನ್ನು ವಿಚಾರಣೆಗೆ ಒಳಪಡಿಸಿದರು. ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಯನ್ನು ನಡೆಸಿದರು. ಆಗ, ಶಂಕರ್ ಗೌಡ ಸಹ ಗಾಂಜಾ ನಶೆಯಲ್ಲಿರುವುದು ದೃಢವಾಯಿತು.
ಈ ಹಿನ್ನಲೆ ಈ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದರು. ಗಾಂಜಾ ವ್ಯಸನಿಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಕಾನೂನು ಕ್ರಮ ಜರುಗಿಸಿದರು.