ಜೊಯಿಡಾ: ಅಣಶಿಯ ಸಂತೋಷ ಹರಿಜನ್ ಎಂಬಾತರ ಬೈಕ್ ಏರಿದ್ದ ಸ್ಮಿತಾ ಹರಿಜನ್ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.
ಜೂ 23ರಂದು ಸಂತೋಷ ಹರಿಜನ್ ಜೊಯಿಡಾದ ಬಾಕೀತ್ ಎಂಬ ಮಜರೆಯಿಂದ ಅಣಶಿ ಕಡೆ ಬರುತ್ತಿದ್ದ. ಆಗ ದಾರಿ ಮದ್ಯೆ ಇದ್ದ ಸ್ಮಿತಾ ಹರಿಜನ್ ಎಂಬಾತರನ್ನು ಆತ ಬೈಕಿನಲ್ಲಿ ಕೂರಿಸಿಕೊಂಡಿದ್ದ. ಅಣಶಿಯಿಂದ 1ಕಿಮೀ ದೂರದಲ್ಲಿರುವಾಗ ಬೈಕ್ ಸ್ಕಿಡ್ ಆಗಿದ್ದು, ಆಗ ಹಿಂದೆ ಕೂತಿದ್ದ ಸ್ಮಿತಾ ನೆಲಕ್ಕೆ ಅಪ್ಪಳಿಸಿ ಸಾವನಪ್ಪಿದ್ದಾರೆ.
Discussion about this post