ಕಾರವಾರ: ಕದ್ರಾ ಅಣೆಕಟ್ಟಿನ ಬಳಿ ಸಾರ್ವಜನಿಕರಿಗೆ ಮದ್ಯ ವಿತರಿಸುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಮಲ್ಲಾಪುರ ಬಳಿಯ ಹರ್ಟುಗಾದ ಶಂಕರ್ ಅಸ್ನೋಟಿಕರ್ ಎಂಬಾತ ಗಾಂಧಿನಗರದ ಹತ್ತಿರ ಹರಿಯುವ ಕದ್ರಾ ಡ್ಯಾಮಿನ ಹಳ್ಳದ ಬಳಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ. ಹಲವರು ಇಲ್ಲಿ ಆಗಮಿಸಿ, ಪ್ರಕೃತಿ ಸೌಂದರ್ಯವನ್ನು ಆಹ್ವಾದಿಸುತ್ತ ಮದ್ಯ ಸೇವಿಸುತ್ತಿದ್ದರು. ಆದರೆ, ಇದಕ್ಕೆ ಯಾವುದೇ ಅನುಮತಿ ಇರಲಿಲ್ಲ. ಈ ಮಾಹಿತಿ ತಿಳಿದು ಪೊಲೀಸರು ದಾಳಿ ನಡೆಸಿದ್ದು, ಸರಾಯಿ ನಶೆಯಲ್ಲಿದ್ದವರು ಓಡಿ ಪರಾರಿಯಾದರು. ಮದ್ಯ ವಿತರಿಸುತ್ತಿದ್ದ ಶಂಕರ್ ಅಸ್ನೋಟಿಕರ್ ಸಿಕ್ಕಿಬಿದ್ದಿದ್ದ. ಆತನಿಂದ ಹಲವು ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದರು.
Discussion about this post