6

ಕಬ್ಬು ರೈತರ ಬೇಡಿಕೆ ಬಗ್ಗೆ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದೇನು?

ಕಬ್ಬು ಬೆಳೆಗಾರರಿಗೆ ನೆರವು: ಕೇಂದ್ರದ ವರದಿ ಬಳಿಕ ಅಂತಿಮ ನಿರ್ಧಾರ – ಸಚಿವ ರುದ್ರಪ್ಪ ಲಮಾಣಿ

ಹಾವೇರಿ: ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಸಕ್ಕರೆ ಕಾರ್ಖಾನೆಗಳ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚಿಸಿ ನಿರ್ಧಾರ ಕೈಗೊಳ್ಳಲಿವೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ನಿನ್ನೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಲಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೆ ಸಕ್ಕರೆ ಕಾರ್ಖಾನೆ ಮಾಲೀಕರ ಹೊಣೆಗಾರಿಕೆಯೂ ಇದೆ ಎಂದರು.

ಅಕ್ಟೋಬರ್ 29ರಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಸಮಿತಿಯನ್ನು ಕಳುಹಿಸಲಿದ್ದು, ಸಮಿತಿಯ ವರದಿ ಬಂದ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚಿಸಿ ರೈತರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಿವೆ ಎಂದು ತಿಳಿಸಿದರು.

ರೈತರು ಎಸ್‌ಎಪಿ ಅಡಿ ಪ್ರತಿ ಟನ್ ಕಬ್ಬಿಗೆ ₹1,000 ಹೆಚ್ಚುವರಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.

ರೈತರಿಗೆ ಅನುಕೂಲ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಕಾರ್ಖಾನೆ ಮಾಲೀಕರ ಸಮಸ್ಯೆಗಳನ್ನೂ ಆಲಿಸಲಾಗಿದ್ದು, ರೈತರಿಗೆ ನೆರವಾಗುವಂತೆ ಅವರಿಗೂ ಸೂಚಿಸಲಾಗಿದೆ. ಆದರೆ ಎಷ್ಟು ನೆರವು ನೀಡಲಾಗುತ್ತದೆ ಎಂಬುದನ್ನು ವರದಿ ಹಾಗೂ ಚರ್ಚೆಯ ಬಳಿಕ ತಿಳಿಸಲಾಗುವುದು ಎಂದು ರುದ್ರಪ್ಪ ಲಮಾಣಿ ಸ್ಪಷ್ಟಪಡಿಸಿದರು.

Related Posts

ಎಸ್.ವಿ. ಸಂಕನೂರ ಗೆಲುವು: ಹಾವೇರಿಯಲ್ಲಿ ಬಿಜೆಪಿ ಸಂಭ್ರಮ!

Share this… Facebook Pinterest Twitter Linkedin Whatsappಎಸ್.ವಿ. ಸಂಕನೂರ ಗೆಲುವು: ಹಾವೇರಿಯಲ್ಲಿ ಬಿಜೆಪಿ ನಾಯಕರಿಂದ ಸಿಹಿ ಹಂಚಿ ಸಂಭ್ರಮ ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ…

ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕೌಂಟ್‌ಡೌನ್ ಶುರು? ಬೊಮ್ಮಾಯಿ ಸ್ಫೋಟಕ ಹೇಳಿಕೆ!

Share this… Facebook Pinterest Twitter Linkedin Whatsappಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಸರ್ಕಾರದ ಕೌಂಟ್‌ಡೌನ್ ಶುರು – ಬಸವರಾಜ ಬೊಮ್ಮಾಯಿ 2028ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟಕ್ಕೆ ಬಹುಮತದ ಗೆಲುವು ಶತಸಿದ್ಧ: ಮಾಜಿ ಸಿಎಂ ವಿಶ್ವಾಸ ಬೆಂಗಳೂರು: ವಿಧಾನ ಪರಿಷತ್ತಿನ…

You cannot copy content of this page