6

ರಾಣೇಬೆನ್ನೂರಿನಲ್ಲಿ ಹಿರಿಯರಿಗೆ ಕಾನೂನು ನೆರವು

ಹಿರಿಯ ನಾಗರಿಕರಿಗೆ ಕಾನೂನು ಅರಿವು-ನೆರವು

ಹಾವೇರಿ: ಅ.29 : ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ರಾಣೇಬೆನ್ನೂರು ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ರಾಣೇಬೆನ್ನೂರು ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಕೇಂದ್ರ ಸರ್ಕಾರದ State Action Plan For Senior Citizen ಕಾರ್ಯಕ್ರಮದ ಅಂಗವಾಗಿ ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ನೀಡುವ ಕಾರ್ಯಕ್ರಮ ಅ.28ರಂದು ರಾಣೇಬೆನ್ನೂರು ನಗರದ ನಿವೃತ್ತ ನೌಕರರ ಭವನದಲ್ಲಿ ಜರುಗಿತು.

ನ್ಯಾಯವಾದಿ ಟಿ.ಎಸ್. ಜಂಗೇಡೇರ ಅವರು ಮಾತನಾಡಿ, ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಸಂರಕ್ಷಣಾ ಕಾಯ್ದೆ-2007ರ ಮಾಹಿತಿ ನೀಡಿದರು ಹಾಗೂ ಕಾನೂನಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕುಮಾರ ಮಡಿವಾಳರ ಮಾತನಾಡಿ, ಮನುಷ್ಯನಿಗೆ ಮುಪ್ಪು ವಯೋಸಹಜವಾಗಿ ಬರಲಿದೆ. ಹಾಗಾಗಿ ಇಳಿ ವಯಸ್ಸಿನಲ್ಲಿರುವವರನ್ನು ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ. ಕಿರಣಕುಮಾರ ಅಗಡಿ ಮಾತನಾಡಿ, ವಯಸ್ಸಾದಂತೆ ದೇಹದ ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಹಿರಿಯರು ಸುಲಭವಾಗಿ ಜೀರ್ಣವಾಗುವ ನಾರಿನಾಂಶ, ಕ್ಯಾಲ್ಸಿಯಂ ಮತ್ತು ವಿಟಮಿನ್ ಇರುವ ಆಹಾರ ಸೇವಿಸಬೇಕು. ಹಸಿ ತರಕಾರಿ, ಹಣ್ಣುಗಳು, ಧಾನ್ಯಗಳು ಹಾಗೂ ಹಾಲಿನ ಉತ್ಪನ್ನಗಳು ಉತ್ತಮವಾಗಿವೆ. ಉಪ್ಪು, ಸಕ್ಕರೆ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಎಂ. ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶ್ರೀಮತಿ ಆಶು ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಜಯಶ್ರೀ ಎಂ., ಶ್ರೀಮತಿ ತಯ್ಯಾಬ್ ಪಾಟೀಲ, ಡಿ.ಎಸ್. ಅಜ್ಜಿ, ವಕೀಲರ ಸಂಘ ಹಾಗೂ ನಿವೃತ್ತ ನೌಕರರ ಸಂಘದ ಸರ್ವ ಪದಾಧಿಕಾರಿಗಳು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

ಗೊರವಯ್ಯನ ವೇಷದಲ್ಲಿ ಹೋದ ವ್ಯಕ್ತಿ ನಾಪತ್ತೆ

Share this… Facebook Pinterest Twitter Linkedin Whatsappಪುರುಷ ಕಾಣೆ ಹಾವೇರಿ: ಅ.29 : ರಾಣೇಬೆನ್ನೂರು ತಾಲೂಕು ಕರುರ ಗ್ರಾಮದ ನಿವಾಸಿ 51 ವರ್ಷದ ಅಜ್ಜಪ್ಪ ನಿಂಗಪ್ಪ ಕರಿಗಾರ ಎಂಬುವವರು 30-08-2026ರಂದು ಗೊರವಯ್ಯನ ವೇಷದಲ್ಲಿ ಭಿಕ್ಷಾಟನೆ ಮಾಡಲು ಹೋದವರು ಮರಳಿ ಬಾರದೆ…

ಹಾವೇರಿ: ವಿಕಲಚೇತನರಿಗೆ ಆನ್‌ಲೈನ್ ಅರ್ಜಿ ಆಹ್ವಾನ

Share this… Facebook Pinterest Twitter Linkedin Whatsappವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಹಾವೇರಿ: ಅ.29 – ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 2026–27ನೇ ಸಾಲಿನ ವಿವಿಧ ಫಲಾನುಭವಿಗಳ ಆಧಾರಿತ ಯೋಜನೆಗಳ ಸೌಲಭ್ಯ ಪಡೆಯಲು…

You cannot copy content of this page