6
  • Latest

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ ಪಣ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ ಪಣ

AchyutKumar by AchyutKumar
in ಲೇಖನ

ಕಾನ್ಸರ್’ಗೆ ತುತ್ತಾಗಿ ಚಿತ್ರಹಿಂಸೆ ಅನುಭವಿಸಿ ಸಾವನಪ್ಪಿದವರನ್ನು ಹತ್ತಿರದಿಂದ ಕಂಡ ಕುಮಟಾದ ಸುಮಂಗಲಾ ಆಚಾರಿ ತಮ್ಮ ಮಗಳ ಜೊತೆ ಸೇರಿ `ಪ್ಲಾಸ್ಟಿಕ್ ಮುಕ್ತ ಸಮಾಜ’ ನಿರ್ಮಾಣಕ್ಕಾಗಿ ದುಡಿಯುತ್ತಿದ್ದಾರೆ. ಇದಕ್ಕಾಗಿ ಅವರು ಆಯ್ದುಕೊಂಡ ಮಾರ್ಗ ಬಟ್ಟೆಗಳಿಂದ ಕೈ ಚೀಲ ತಯಾರಿಸುವ ಉದ್ದಿಮೆ!
2018ರಲ್ಲಿ 1.25 ಲಕ್ಷ ರೂ ಸಾಲ ಮಾಡಿ ಕುಮಟಾದ ಸಿದ್ದಿನಬಾವಿಯಲ್ಲಿನ ತಮ್ಮ ಮನೆಯಲ್ಲಿಯೇ ಅವರು ಬಟ್ಟೆಯ ಕೈ ಚೀಲಗಳನ್ನು ಹೊಲಿಯಲು ಶುರು ಮಾಡಿದರು. ಇದೀಗ ಅವರು ಇನ್ನೂ ಐದು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಕೇವಲ 2ರೂ ಲಾಭದಿಂದ ಮಾರಾಟವಾಗುವ ಬಟ್ಟೆಯ ಕೈ ಚೀಲಗಳಿಂದ ಅವರು ಪ್ರತಿ ತಿಂಗಳು 60 ಸಾವಿರ ರೂ ದುಡಿಯುತ್ತಿದ್ದಾರೆ.
ಸಿದ್ಧನಬಾವಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ ಐವರು ಕಾನ್ಸರ್‌ನಿಂದ ಸಾವನಪ್ಪಿದರು. ಇದನ್ನು ಕಂಡ ಸುಮಂಗಲಾ ಆಚಾರಿ `ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ’ಕ್ಕಾಗಿ ಹೋರಾಟ ನಡೆಸಿದರು. ಪ್ಲಾಸ್ಟಿಕ್ ಬಳಸದಂತೆ ಬೀದಿ ಬೀದಿಯಲ್ಲಿ ಜಾಗೃತಿ ಮೂಡಿಸುವಾಗ ಜನ ಇವರನ್ನು ನೋಡಿ ವ್ಯಂಗ್ಯವಾಡಿದರು. ಆಗ ಪ್ಲಾಸ್ಟಿಕ್ ಬದಲಾಗಿ ಬಟ್ಟೆಯಿಂದ ಬ್ಯಾಗ್ ತಯಾರಿಸುವ ಉದ್ದಿಮೆ ಶುರು ಮಾಡಿದರು. ಮೊದಲು ಕೆಲವಡೆ ಉಚಿತವಾಗಿ ತಾವು ತಯಾರಿಸಿದ ಬ್ಯಾಗ್ ವಿತರಿಸಿ ಪ್ರಚಾರ ನಡೆಸಿದರು. ಬ್ಯಾಗ್ ಗುಣಮಟ್ಟದ ಬಗ್ಗೆ ಮೆಚ್ಚುಗೆ ಶುರುವಾಗುತ್ತಲೇ ಅಲ್ಪ ಮಟ್ಟದ ಲಾಭ ಇರಿಸಿಕೊಂಡು ಮಾರಾಟ ಶುರು ಮಾಡಿದರು. ಇದೀಗ ಅವರ ಬಟ್ಟೆಯ ಬ್ಯಾಗ್ ಉದ್ದಿಮೆ ದೊಡ್ಡದಾಗಿ ಬೆಳೆದಿದೆ. ಸುಮಾರು 17ಬಗೆಯ ಬಟ್ಟೆಯ ಕೈ ಚೀಲಗಳನ್ನು ಅವರು ತಯಾರಿಸುತ್ತಾರೆ. ಇಷ್ಟಾದರೂ `ಜನ ಪ್ಲಾಸ್ಟಿಕ್ ವ್ಯಾಮೋಹ ಬಿಟ್ಟಿಲ್ಲ’ ಎಂದು ಅವರು ನೋವಿನಿಂದ ನುಡಿಯುತ್ತಾರೆ.
ಸುಮಂಗಲಾ ಆಚಾರಿ ಅವರ ಪತಿ ಕೊಲ್ಲೂರುಗೆ ತೆರಳುವ ಬಸ್’ನಲ್ಲಿ ಕಂಡೆಕ್ಟರ್ ಆಗಿದ್ದರು. ಹೀಗಾಗಿ ಮೂಕಾಂಬಿಕಾ ದೇವಿಯ ಹೆಸರಿನಲ್ಲಿ ಸುಮಂಗಲಾ ಆಚಾರಿ ಅವರು `ಮೂಕಾಂಬಿಕಾ ಇಕೋ ಬ್ಯಾಗ್’ ಎಂಬ ಉದ್ದಿಮೆ ನಡೆಸಿದರು. ಪ್ರಸ್ತುತ ರಾಜ್ಯದ ನಾನಾ ದೇವಾಲಯಗಳಿಗೆ ಅವರು ತಯಾರಿಸಿದ ಕೈ ಚೀಲಗಳು ಬಳಕೆಯಾಗುತ್ತಿವೆ. 5ರೂಪಾಯಿಯಿಂದ 250ರೂಪಾಯಿವರೆಗಿನ ವಿವಿಧ ರೀತಿಯ ಕೈ ಚೀಲಗಳನ್ನು ಇವರು ತಯಾರಿಸುತ್ತಾರೆ. ಗೋಕರ್ಣ ಸೇರಿದಂತೆ ಹಲವು ದೇವಾಲಯಗಳಲ್ಲಿ ಅವರ ಕೈಗಳಲ್ಲಿ ಅರಳಿದ ಚೀಲಗಳಲ್ಲಿ ಪ್ರಸಾದ ಕೊಡಲಾಗುತ್ತದೆ. ಇಡಗುಂಜಿ ತೇರಿನ ಬಾವುಟವನ್ನು ಸಹ ಅವರು ನಿರ್ಮಿಸಿಕೊಟ್ಟಿದ್ದಾರೆ.
`ಮೊದಲು ರಾತ್ರಿ 2ಗಂಟೆಯವರೆಗೆ ಕುಳಿತು ಬ್ಯಾಗ್ ತಯಾರಿಸುತ್ತಿದ್ದೇವು. ಸದ್ಯ ಬ್ಯಾಗ್ ಜೊತೆ ಮಹಿಳೆಯರ ಪೌಚ್, ಮಕ್ಕಳ ಸಮವಸ್ತ್ರಗಳನ್ನು ತಯಾರಿಸುತ್ತಿದ್ದು, ಅರಣ್ಯ ಇಲಾಖೆಯವರಿಗೆ ಗಿಡಗಳನ್ನು ನೆಡಲು ಪ್ಲಾಸ್ಟಿಕ್ ಬದಲಾಗಿ ಕಾಗದ ಅಥವಾ ಬಟ್ಟೆಯ ಚೀಲ ಪೂರೈಸುವ ಚಿಂತನೆಯಿದೆ’ ಎಂದು ಸುಮಂಗಲಾ ಅವರ ಪುತ್ರಿ ವೈಷ್ಣವಿ ಹೇಳಿದರು.

ADVERTISEMENT

ವಿದ್ಯಾರ್ಥಿಗಳ ಮೂಲಕ ಕೈ ಚೀಲ ಮಾರಾಟ!
ಒಮ್ಮೆ ಅವರ ಮನೆಗೆ ಬೆಂಗಳೂರಿನಿoದ ಇಂಜಿನಿಯರಿoಗ್ ವಿದ್ಯಾರ್ಥಿಯೊಬ್ಬರು ಬಂದಿದ್ದರು. ಮಹಿಳೆಯರು ಬಳಸುವ ಪೌಚ್, ಬ್ಯಾಗ್ ಗಳನ್ನು ಪಡೆದ ಅವರು ಬೆಂಗಳೂರಿಗೆ ತೆರಳಿ ಅದನ್ನು ಮಾರಾಟ ಮಾಡಿದರು. ಸುಮಂಗಲಾ ಅವರ ಬಳಿ ತರಕಾರಿ ತರಲು ಬಳಸುವ ಚೀಲ, ಚಿನ್ನಾಭರಣಗಳನ್ನು ಇಡುವ ಚೀಲ, ಅಡುಗೆ ಮಾಡುವಾಗ ಬಳಸುವ ಏಪ್ರಾನ್, ದೇವಾಲಯಗಳಲ್ಲಿ ಪ್ರಸಾದಕ್ಕೆ ಬಳಸುವ ಚೀಲ, ಮಾಸ್ಕ್, ಮಹಿಳೆಯರಿಗಾಗಿ ಪೌಚ್, ಚೂಡಿದಾರ, ಶಾಲಾ ಮಕ್ಕಳ ಸಮವಸ್ತ್ರಗಳ ಎಲ್ಲವೂ ಲಭ್ಯ. ಉದ್ಯೋಗ ಇಲ್ಲದವರಿಗೆ ಅವರು ತಮ್ಮ ಬ್ಯಾಗ್ ಇತರರಿಗೆ ಮಾರಾಟ ಮಾಡಿ ಹಣಗಳಿಸುವ ಉಪಾಯವನ್ನು ಕಲಿಸುತ್ತಾರೆ. ಸುಮಂಗಲಾ ಅವರ ಫೋನ್ ನಂ: 9482580866

Advertisement. Scroll to continue reading.
Advertisement. Scroll to continue reading.
Previous Post

ಜನಸ್ಪಂದನಾ ಸಭೆಯಲ್ಲಿ ದೂರುಗಳ ಸುರಿಮಳೆ

Next Post

ನಾನೇನು ಮಾಡಿಲ್ಲ, ನಂದೇನು ತಪ್ಪಿಲ್ಲ!

Next Post

ನಾನೇನು ಮಾಡಿಲ್ಲ, ನಂದೇನು ತಪ್ಪಿಲ್ಲ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ