ಭಟ್ಕಳ: ಶಿರಾಲಿಯ ಮಹಾಲಕ್ಷಿ ಕೋಡಿಯಾ (26) ಎಂಬಾಕೆ ಬಾವಿಗೆ ಹಾರಿ ಜೀವಬಿಟ್ಟಿದ್ದಾಳೆ.
ತಟ್ಟಿಹಕ್ಕಲು ಬಳಿಯ ಎಂ ಜಿ ಎಂ ಟ್ರೆಡರ್ಸ’ನಲ್ಲಿ ಈಕೆ ಕಂಪ್ಯುಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಕೆಲಸಕ್ಕೆ ಹೋಗುವುದು ಬೇಡ ಎಂದು ಮನೆಯವರು ಆಕೆಗೆ ಹೇಳಿದ್ದರು. ಇದೇ ಕಾರಣಕ್ಕೆ ಮನನೊಂದ ಆಕೆ ಜೂ 2ರಂದು ಬಾವಿಗೆ ಹಾರಿದ್ದಾಳೆ. ಲೈನ್‌ಮೆನ್ ಆಗಿ ಕೆಲಸ ಮಾಡುತ್ತಿರುವ ಆಕೆಯ ಅಣ್ಣ ಕೇಶವ ಕೋಡಿಯಾ ಸಂಜೆ ಮನೆಗೆ ಬಂದಾಗ ಆಕೆ ಸಾವನಪ್ಪಿರುವ ವಿಷಯ ಗೊತ್ತಾಗಿದೆ.
Discussion about this post