ಭಟ್ಕಳ: ಹೈದ್ರಾಬಾದಿನಿಂದ ಬಸ್ಸಿನಲ್ಲಿ ಭಟ್ಕಳಕ್ಕೆ ಬಂದ ಹನೀಫಾಬಾದ್‌ನ ಮುಜೀದ್ ಅಬ್ದುಲ್ ಹಮೀದ್ ಎಂಬಾತರಿಗೆ ಆರು ಜನ ಬಾಸುಂಡೆ ಬರುವ ರೀತಿ ಥಳಿಸಿದ್ದಾರೆ.
ಜುಲೈ 1ರಂದು ಈತ ಹೈದರಬಾದಿನಿಂದ ಭಟ್ಕಳಕ್ಕೆ ಹೊರಟಿದ್ದ. ಅನಾರೋಗ್ಯದ ಕಾರಣ ಚಾಲಕನ ಪಕ್ಕದ ಆಸನದಲ್ಲಿ ಕುಳಿತಿದ್ದ. ಇದಕ್ಕೆ ಚಾಲಕ ಹಾಗೂ ನಿರ್ವಾಹಕರು ವಿರೋಧ ವ್ಯಕ್ತಪಡಿಸಿ, ಆತನನ್ನು ಇಲ್ಲಿಯೇ ಇಳಿಸಿ ಮುಂದೆ ಹೋಗುವುದಾಗಿ ಎಚ್ಚರಿಸಿದ್ದರು. ಇದರಿಂದ ಬೇಸತ್ತ ಆತ ಗಂಗಾವತಿ ಬಳಿ ಇಳಿದು ಬೇರೆ ವಾಹನಕ್ಕಾಗಿ ನಿಂತಿದ್ದ. ಆ ವೇಳೆ ಅಲ್ಲಿಗೆ ಬಂದ ಆರು ಜನ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
`ಹೆಣ್ಣು ಮಕ್ಕಳು ಇರುವ ಮನೆ ಬಳಿ ರಾತ್ರಿ ಅಡ್ಡಾಡುತ್ತಿದ್ದೀಯಾ?” ಎಂದು ಪ್ರಶ್ನಿಸಿ ಬೈದು ಕಾಲಿನಿಂದ ಒದ್ದಿದ್ದಾರೆ. ಕೈಯಿಂದ ಮೈಮೇಲೆ ಪೂರ್ತಿ ಹೊಡೆದಿದ್ದಾರೆ. ಒಬ್ಬ ತನ್ನ ಬೆಲ್ಟಿನಿಂದ ಆತನ ಕುತ್ತಿಗೆ ಅದುಮಿ ಹೆದರಿಸಿದ್ದು, ಮತ್ತೊಬ್ಬ ಸ್ಟೀಲ್ ರಾಡಿನಿಂದ ಥಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಆತನ ಸಂಬAಧಿಕರು ಹೈದರಾಬಾದಿಗೆ ತೆರಳುವ ಬಸ್ ತಡೆದು ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ಕೊಡದ ಕಾರಣ ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದರು.




Discussion about this post