6 Skip to content

ಸೇನಾ ನೇಮಕಾತಿ: ತರಬೇತಿ ನೀಡುವವರಿಗಾಗಿ ಹುಡುಕಾಟ

ಕಾರವಾರದ ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಪೂರ್ವ ತರಬೇತಿ ಶಾಲೆಗೆ 2024-25ನೇ ಸಾಲಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೇನಾ ಆಯ್ಕೆ ಕುರಿತು ಲಿಖಿತ ಪರೀಕ್ಷೆಗೆ ತರಬೇತಿ ನೀಡಲು ತರಬೇತಿದಾರರ ಆಯ್ಕೆಗಾಗಿ ಅರ್ಹ ತರಬೇತಿ ಸಂಸ್ಥೆಗಳಿoದ ಅರ್ಜಿ ಆಹ್ವಾನಿಸಲಾಗಿದೆ.
ಸೇನಾ ಆಯ್ಕೆ ಪೂರ್ವ ತರಬೇತಿ ಹಾಗೂ ಪೊಲೀಸ್ ಇಲಾಖೆಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಅನುಭವ ಹೊಂದಿರುವವರು ಜುಲೈ 10ರ ಒಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದು.

Leave a comment

Leave a Reply

You cannot copy content of this page