ಮೀನು ಸಂತಾನೋತ್ಪತ್ತಿಯ ಕಾಲವಾದ ಕಾರಣ ಸರ್ಕಾರ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದು, ಅರಬ್ಬಿ ಸಮುದ್ರದಲ್ಲಿ ಅಪಾಯದ ರೀತಿ ಅಲೆಗಳ ಅಬ್ಬರವಿದ್ದರೂ ಅದನ್ನು ಲೆಕ್ಕಿಸದೇ ಮಲ್ಪೆ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಉಡುಪಿಯಿಂದ ಕಾರವಾರಕ್ಕೆ ಬಂದ ಮೀನುಗಾರಿಕಾ ಬೋಟಿಗೆ ಇಲ್ಲಿನ ಅಧಿಕಾರಿಗಳು ಬಿಸಿಮುಟ್ಟಿಸಿ ಅವರ `ಮಂಡೆಬಿಸಿ’ ಮಾಡಿದ್ದಾರೆ.
ಮಲ್ಪೆಯ ಗಣಪತಿ ಹೆಸರಿನ ಬೋಟ್ ಹಾಗೂ ಮೀನುಗಾರಿಕಾ ಕಾರ್ಮಿಕರನ್ನು ಬೈತಖೋಲ್’ದಲ್ಲಿ ಮೀನುಗಾರಿಕಾ ಅಧಿಕಾರಿಗಳು ಜೂ 6ರಂದು ವಶಕ್ಕೆ ಪಡೆದರು. ಈ ವೇಳೆ ಸ್ಥಳೀಯ ಮೀನುಗಾರರು ಮಲ್ಪೆ ಮೀನು ಕಾರ್ಮಿಕರಿಗೆ ಬುದ್ದಿ ಹೇಳಿದರು. ಪ್ರತಿ ವರ್ಷ ಮೀನುಗಾರಿಕೆ ನಿಷೇಧದ ಮಾಹಿತಿ ಇದ್ದರೂ ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆ ನಡೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬೋಟಿನ ಮಾಲಕರಿಗೆ ಬುದ್ದಿ ಹೇಳಿದ ಅಧಿಕಾರಿಗಳು `ಅಗಷ್ಟ್ 1ರ ನಂತರ ಮೀನುಗಾರಿಕೆಯ ಪರ್ವಕಾಲ ಶುರುವಾಗಲಿದೆ. ಆಗ ಸಮುದ್ರದ ಅಬ್ಬರ ಸಹ ಕಡಿಮೆ ಆಗಲಿದ್ದು, ಆ ವೇಳೆ ಕೆಲಸ ಶುರು ಮಾಡಿ’ ಎಂದು ಸೂಚಿಸಿ ನಂತರ ಅವರನ್ನು ಬಿಡುಗಡೆ ಮಾಡಿದರು. ಮತ್ತೆ ಈ ರೀತಿ ವರ್ತಿಸಿದಲ್ಲಿ ಬೋಟನ್ನು ಜಪ್ತು ಮಾಡುವುದಾಗಿ ಎಚ್ಚರಿಸಿದರು.
Discussion about this post