ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದ ಯಲ್ಲಾಪುರ ಪಟ್ಟಣ ಪಂಚಾಯತ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಎಂಬಾತರಿಗೆ ಒಂದುವರೆ ವರ್ಷ ಜೈಲು ಶಿಕ್ಷೆ ಜೊತೆ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈತನಿಗೆ ಲಂಚ ಸ್ವೀಕರಿಸಲು ತಿಳಿಸಿದ ಪ್ರಕಾಶ ಕೃಷ್ಣ ನಾಯ್ಕ ಎಂಬಾತನಿಗೂ ಇದೇ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಉದ್ಯಮನಗರದ ಮಂಜುನಾಥ ಹೆಗಡೆ ಎಂಬಾತರು ಮನೆಗೆ ಹೊಸದಾಗಿ ವಿದ್ಯುತ್ ಪಡೆಯಲು ಹೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಹೆಸ್ಕಾಂ’ನವರು ಮನೆಯ ದಾಖಲೆ ಒದಗಿಸುವಂತೆ ಸೂಚಿಸಿದ್ದರು. ಅದರ ಪ್ರಕಾರ ಪಟ್ಟಣ ಪಂಚಾಯತಗೆ ತೆರಳಿದ ಮಂಜುನಾಥ ಹೆಗಡೆ ಅಲ್ಲಿ ಪ್ರಕಾಶ ಕೃಷ್ಣ ನಾಯ್ಕ ಎಂಬಾತರನ್ನು ಭೇಟಿ ಮಾಡಿ, ಮನೆಯ ಉತಾರ್ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರಕಾಶ ನಾಯ್ಕ ಮೇಲಧಿಕಾರಿಗಳ ಹೆಸರಿನಲ್ಲಿ 6 ಸಾವಿರ ರೂ ಲಂಚ ಬೇಡಿದ್ದು, 4 ಸಾವಿರ ರೂಪಾಯಿಯನ್ನು ಪ್ರತಾಪನಿಗೆ ನೀಡುವಂತೆ ಸೂಚಿಸಿದ್ದರು. ಅದರ ಪ್ರಕಾರ 4 ಸಾವಿರ ರೂ ಹಣ ಪಡೆಯುವ ವೇಳೆ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಲೋಕಾಯುಕ್ತ ದಾಳಿಗೆ ಒಳಗಾಗಿ ಇದೀಗ ಆರು ತಿಂಗಳ ಜೈಲು ಹಾಗೂ 2 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ಮೇಲಧಿಕಾರಿಗಳ ಹೆಸರಿನಲ್ಲಿ ಲಂಚ ಬೇಡಿದ ಪ್ರಕಾಶ ನಾಯ್ಕ’ಗೂ ನ್ಯಾಯಾಲಯ ಜೈಲು ಹಾಗೂ ದಂಡ ವಿಧಿಸಿದೆ. ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ಈ ಆದೇಶ ಹೊರಡಿಸಿದ್ದಾರೆ.
Discussion about this post