6 Skip to content

ಮದುವೆಗೆ ಹೋಗಿದ್ದ ಮಹಿಳೆಗೆ ಆಘಾತ: ಮಗಳ ಶವ ನೋಡಿ ನೇಣಿಗೆ ಶರಣಾದ ತಾಯಿ

ಭಟ್ಕಳದ ಯಲ್ವಡಿಕವೂರು ಬಳಿಯ ಗೋರಿಕಲ್ಲು ಮನೆಯಲ್ಲಿ ವಾಸವಾಗಿದ್ದ ಮಾದೇವಿ ನಾಯ್ಕ ನೇಣಿಗೆ ಶರಣಾಗಿದ್ದು, ಇದನ್ನು ನೋಡಿದ ಆಕೆಯ ಕೃಷ್ಣಮ್ಮ ನಾಯ್ಕ ಸಹ ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ.
ಕೃಷ್ಣಮ್ಮ ಹಾಗೂ ಅವರ ಮಗಳು ಮಾದೇವಿ ಒಂದೇ ಊರಿನಲ್ಲಿ ವಾಸವಾಗಿದ್ದರು. ಸೋಮವಾರ ಮನೆಯವರೆಲ್ಲರೂ ಮದುವೆಗೆ ಹೋಗಿದ್ದು, ಈ ವೇಳೆ ಮಾದೇವಿ ನೇಣಿಗೆ ಕೊರಳೊಡ್ಡಿದ್ದಾಳೆ. ಮದುವೆ ಮನೆಯಿಂದ ಬಂದ ಕೃಷ್ಣಮ್ಮ ಮಾದೇವಿಯ ಶವ ನೋಡಿ ತಾನೂ ಸಾವನಪ್ಪಿದ್ದಾಳೆ.  ಈ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

 

Leave a comment

Leave a Reply

You cannot copy content of this page