ಬೆಳಗಾವಿಯಿಂದ ರಾಮನಗರಕ್ಕೆ ಹೊರಟಿದ್ದ ಬಸ್ಸು ಶುಕ್ರವಾರ ಜೊಯಿಡಾದಲ್ಲಿ ರಸ್ತೆ ಹೊಂಡಕ್ಕೆ ಸಿಕ್ಕಿಬಿದ್ದಿದ್ದು ಪ್ರಯಾಣಿಕರು ಬಸ್ಸನ್ನು ಹೊಂಡದಿoದ ಹೊರ ತಂದಿದ್ದಾರೆ.
ರಾಮನಗರ ಮೂಲಕ ಈ ಬಸ್ಸು ಕಾರವಾರಕ್ಕೆ ಬರಬೇಕಿತ್ತು. ಆದರೆ, ಜೊಯಿಡಾದ ಕುಂಬಾರವಾಡದಲ್ಲಿ ಬಸ್ಸು ಹೊಂಡಕ್ಕೆ ಇಳಿದಿದ್ದು ಅಲ್ಲಿಂದ ಮೇಲೆ ಹತ್ತಲಿಲ್ಲ. ತಾಸುಗಳ ಕಾಲ ಚಾಲಕ ಬಸ್ಸನ್ನು ಹೊರ ತೆಗೆಯುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ನಂತರ ಪ್ರಯಾಣಿಕರು ಕೆಳಗೆ ಇಳಿದು ಬಸ್ಸನ್ನು ದೂಡಿದರು. ಆಗ ಬಸ್ಸು ಹೊಂಡದಿoದ ಹೊರ ಬಂದು ಮುಂದಿನ ಪ್ರಯಾಣ ಬೆಳೆಸಿತು.
ಬಸ್ಸು ತಳ್ಳಿದ ವಿಡಿಯೋ ಇಲ್ಲಿ ನೋಡಿ
ಹೊಂಡಕ್ಕೆ ಬೆದರಿದ ಬಸ್ಸು: ಹೀಗೆ ತಳ್ಳು ಐಸಾ.. ಹಾಗೇ ತಳ್ಳು ಐಸಾ!

Leave a comment