6 Skip to content

ಮಳೆ-ಗಾಳಿಯಿಂದ ಹೆಸ್ಕಾಂ’ಗೆ 9.82 ಕೋಟಿ ರೂ ನಷ್ಟ!

ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ರಭಸ ಗಾಳಿಯಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ’ಗೆ 9.82 ಕೋಟಿ ರೂ ನಷ್ಟವಾಗಿದೆ.
ಗುಡ್ಡ ಕುಸಿತ, ಮರ-ಗಿಡಗಳ ಮುರಿತ, ವಿದ್ಯುತ್ ಕಂಬಕ್ಕೆ ಹಾನಿ ಸೇರಿ ಈ ಪ್ರಮಾಣದಲ್ಲಿ ನಷ್ಟವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಮಳೆ ಕಾರಣದಿಂದ 5,404 ವಿದ್ಯುತ್ ಕಂಬಗಳು, 536 ವಿದ್ಯುತ್ ಪರಿವರ್ತಕಗಳು, 184.43 ಕಿ.ಮೀ. ಉದ್ದದ ವಿದ್ಯುತ್ ತಂತಿ ಹಾಳಾಗಿದೆ.
5,215 ವಿದ್ಯುತ್ ಕಂಬಗಳನ್ನು ಹೆಸ್ಕಾಂ ಸಿಬ್ಬಂದಿ ಬದಲಿಸಿದ್ದಾರೆ. 531 ಟಿಸಿ ದುರಸ್ತಿ ಮುಗಿದಿದೆ. ಹಾನಿಯಾದ 184.43 ಕಿ.ಮೀ. ಉದ್ದದ ವಿದ್ಯುತ್ ತಂತಿಯಲ್ಲಿ 176.69 ಕಿ.ಮೀ. ಉದ್ದದ ವಿದ್ಯುತ್ ತಂತಿ ದುರಸ್ತಿ ನಡೆದಿದೆ.
ಹೆಸ್ಕಾಂ ಕಾರ್ಯವೈಖರಿ ಬಗ್ಗೆ ಜನ ನಿತ್ಯ ಬೈಯುತ್ತಿದ್ದಾರೆ. ಅದರ ನಡುವೆಯೂ ಹೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ವಿದ್ಯುತ್ ಸರಬರಾಜಿಗೆ ನಿರಂತರ ಪ್ರಯತ್ನ ಮುಂದುವರೆಸಿದ್ದಾರೆ.

ತಾಲೂಕುವಾರು ನಷ್ಟದ ಮಾಹಿತಿ

ಶಿರಸಿ 148.53 ಲಕ್ಷ ರೂ

ಸಿದ್ದಾಪುರ 88.90 ಲಕ್ಷ ರೂ

ಯಲ್ಲಾಪುರ 141.80 ಲಕ್ಷ ರೂ

ಮುಂಡಗೋಡ 72.31 ಲಕ್ಷ ರೂ

ಹಳಿಯಾಳ 28.30 ಲಕ್ಷ ರೂ

ಜೋಯಿಡಾ 49.52 ಲಕ್ಷ ರೂ

ದಾಂಡೇಲಿ 4.64 ಲಕ್ಷ ರೂ

ಅಂಕೋಲಾ 88.54 ಲಕ್ಷ ರೂ

ಕಾರವಾರ 38.96 ಲಕ್ಷ ರೂ

ಕುಮಟಾ 121.48 ಲಕ್ಷ ರೂ

ಹೊನ್ನಾವರ 157.28 ಲಕ್ಷ ರೂ

ಭಟ್ಕಳ 42.25 ಲಕ್ಷ ರೂ

Leave a comment

Leave a Reply

You cannot copy content of this page