6 Skip to content

ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!

ಕರ್ನಾಟಕ ಸರ್ಕಾರವು ಯುವನಿಧಿ ಯೋಜನೆಯ ಫಲಾನುಭವಿ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ‘ಯುವನಿಧಿ ಪ್ಲಸ್’ ಕಾರ್ಯಕ್ರಮವನ್ನು ರೂಪಿಸಿದೆ.ಈ ಯೋಜನೆಯಡಿ ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಉಚಿತ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಪಡೆಯಲು ಯುವನಿಧಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ಅಕೌಂಟ್ಸ್ಎಕ್ಸಿಕ್ಯೂಟಿವ್, ಡಿಜಿಟಲ್ ಮಾರ್ಕೆಟಿಂಗ್. ಸೇಲ್ಸ್‌ ಎಕ್ಸಿಕ್ಯೂಟಿವ್, ಸ್ಯಾಪ್, ಐಓಟಿ, ಪಿಎಲ್‌ಸಿ ಪ್ರೋಗ್ರಾಮಿಂಗ್, ಕ್ಯಾಡ್-ಕ್ಯಾಮ್ ಮತ್ತು ಸಿಎನ್‌ಸಿ ಮುಂತಾದ ವೃತ್ತಿಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ.
ತರಬೇತಿಯ ನಂತರ ಸ್ಥಳೀಯವಾಗಿ ಉತ್ತಮ ವೇತನದೊಂದಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ತರಬೇತಿಗಳು ಅಕ್ಟೋಬರ್ 05 ರಿಂದ ಪ್ರಾರಂಭವಾಗಲಿವೆ. ಆಸಕ್ತ ಅಭ್ಯರ್ಥಿಗಳು ದಿನಾಂಕ 03-10-2026 ರೊಳಗಾಗಿ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿ ಜಿಟಿಟಿಸಿ, ದೂರವಾಣಿ 0836-2333159 / 8123719773 ಸಂಪರ್ಕಿಸಲು ಕೋರಲಾಗಿದೆ.

You cannot copy content of this page