ಕಾಳಿದಾಸ ಅಂದ ತಕ್ಷಣ ನಮಗೆ ನೆನಪಾಗುವುದು ಗುಪ್ತರ ಕಾಲದ ಮಹಾಕವಿ ಕವಿರತ್ನ ಕಾಳಿದಾಸ. ಅದು ಸಹಜ ಕೂಡಾ, ಆತ ನಿರ್ಮಿಸಿದ ಇತಿಹಾಸವೇ ಅಂಥಹುದು. ಆದರೀಗ ನಾನು ಹೇಳ ಹೊರಟಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶ್ವೇತಪುರ ಅರ್ಥಾತ್ ಬಿಳಗಿಯಲ್ಲಿ 1000 ವರ್ಷಗಳ ಹಿಂದೆ ಬದುಕಿದ್ದ ಕಾಳಿದಾಸನ ಕಥೆ! ಇದು ಅಚ್ಚರಿಯಾದರೂ ಸತ್ಯ.
ಸಿದ್ದಾಪುರ ತಾಲೂಕಿನ ಅಗ್ಗೆರೆ ಶಾಸನವೊಂದು ಬಿಳಗಿಯ ಕಾಳಿದಾಸನ ಕಥೆ ಹೇಳುತ್ತದೆ. ಇದರ ಕಾಲಮಾನ ಕ್ರಿ ಶ 1095. ಕುಪ್ಪಗೌಡ ಮತ್ತು ಆತನ ಹೆಂಡತಿ ನಾಗಿಯಬ್ಬೆ ಹಾಗೂ ಪುತ್ರ ಜಕ್ಕಗೌಡರು ಒಂದು ಶಿವ ದೇವಾಲಯವನ್ನು ನಿರ್ಮಿಸಿ ಅದಕ್ಕೆ ಭೂದಾನ ನೀಡುತ್ತಾರೆ. ಈ ಶಾಸನವನ್ನು ಬರೆದವನೇ ಬಿಳಗಿಯ `ಕಾಳಿದಾಸ’ ಎಂಬ ಕವಿ! ಈತ ಜನ್ನಮಯ್ಯ ಹೆಗ್ಗಡೆಯ ಪುತ್ರನಾಗಿದ್ದ.
ಈ ಶಾಸನದಲ್ಲಿ ಕೊನೆಯಲ್ಲಿ `ಅನಿತ್ಯಾನಿ ಸರೀರಾನಿ ಪಿಭವೋ ನೈವ ಸಾಸ್ವತಂ ನಿತ್ಯಂ ಸನ್ನಿಹಿತೋ ಮ್ರಿತ್ಯು ಕರ್ತವ್ಯಂ ಧರ್ಮಸಂಗ್ರಹA|| ಬೀಳಿಗೆಯ ಪೆರ್ಗಡೆ ಜನ್ನಮಯ್ಯನ ಮಗ ಕಾಳಿದಾಸಯಂ ಬರೆದಂ’ ಎಂದು ಬರೆಯಲಾಗಿದೆ. ಒಂದು ಕಾಲದಲ್ಲಿ ಭವ್ಯ ಭಾರತದ ಬರಹಕ್ಕೆ ಪರ್ಯಾಯದಂತಿದ್ದ ಮಹಾಕವಿ ಕಾಳಿದಾಸ ತಾನೇ ತಾನಾಗಿ ವಿಜ್ರಂಭಿಸಿದ್ದು ಇತಿಹಾಸ. ಆದರೆ ಕಾಕತಾಳೀಯವೆಂಬoತೆ ನಮ್ಮ ಬಿಳಗಿಯ ಇತಿಹಾಸದಲ್ಲೂ ಒಬ್ಬ ಕಾಳಿದಾಸನಿದ್ದು ಆತನೂ ಕವಿ, ಬರಹಗಾರನಾಗಿದ್ದ ಎಂಬುದು ಒಮ್ಮೆಗೆ ಅಚ್ಚರಿ ತಂದರೂ ಇದು ಸತ್ಯ!
ಕೃಪೆ: ಲಕ್ಷ್ಮೀಶ ಹೆಗಡೆ ಸೋಂದಾ, ಶಿರಸಿ
Discussion about this post