ನದಿ ಅಂಚಿನಲ್ಲಿ ಮೀನು ಹಿಡಿದು ಬದುಕುವ ಹೂವಾ ಗೌಡ ಅದ್ಬುತ ಈಜುಗಾರ. ಅವರು ಬಾಲ್ಯದಲ್ಲಿ ಕಲಿತ ಈ ವಿದ್ಯೆ ಇದೀಗ ನಾಲ್ಕು ಮಕ್ಕಳ ಜೀವ ಕಾಪಾಡಿದೆ!
ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಮಕ್ಕಳು ನದಿ ನೀರಿನಲ್ಲಿ ತೇಲಿ ಹೋಗುವುದನ್ನು ನೋಡಿದ ಹೂವಾ ಗೌಡರು ಸಾಹಸದಿಂದ ಅವರ ಜೀವ ರಕ್ಷಿಸಿದ್ದಾರೆ. ಮಕ್ಕಳನ್ನು ಕಾಪಾಡುವುದಕ್ಕಾಗಿ ನದಿಗೆ ಹಾರಿದ ಅವರು ತಮ್ಮ ಜೀವದ ಹಂಗನ್ನು ಮರೆತು, ಮಕ್ಕಳನ್ನು ದಡಕ್ಕೆ ಕರೆತಂದಿದ್ದಾರೆ.
ಉಳವರೆಯ ಹೂವಾ ಗೌಡ ಜು 16ರ ಬೆಳಗ್ಗೆ ಎದ್ದ ತಕ್ಷಣ ನದಿಯ ರೂಪ ಬದಲಾಗಿದನ್ನು ಗಮನಿಸಿದ್ದರು. ಅದಾದ ಕೆಲ ಹೊತ್ತಿನಲ್ಲಿ ಗಂಗಾವಳಿಯ ನದಿಯೊಳಗೆ ಶಿರೂರು ಮಣ್ಣು ಬಂದಿದ್ದು, ಗುಡ್ಡದ ಬಾರಕ್ಕೆ ನದಿಯ ಸ್ವರೂಪ ಪೂರ್ತಿಯಾಗಿ ಬದಲಾಗಿತ್ತು. ಅಲ್ಲಿದ್ದ ಮನೆಗಳನ್ನು ಸಹ ನದಿಯ ನೀರು ಕೊಚ್ಚಿಕೊಂಡು ಹೋಗಲು ಶುರು ಮಾಡಿತ್ತು. ಆ ವೇಳೆ ಅಲ್ಲಿಯೇ ಇದ್ದ ನಾಲ್ಕು ಮಕ್ಕಳು ಬದುಕುವುದಕ್ಕಾಗಿ ಕೈಗೆ ಸಿಕ್ಕ ಕೋಲು-ಕಲ್ಲು ಹಿಡಿದು ಕೂಗುತ್ತಿದ್ದರು. ಮಕ್ಕಳು ಇನ್ನೇನೂ ಕಣ್ಮರೆ ಆಗಲಿದ್ದಾರೆ ಎಂಬ ಸನ್ನಿವೇಶದಲ್ಲಿ ಹೂವಾ ಗೌಡರು ನೀರಿಗೆ ಧುಮುಕಿ ಅವರನ್ನು ಹಿಡಿದು ದಡಕ್ಕೆ ಎಳೆದು ತಂದರು.
ಹೂವಾ ಗೌಡರ ಸಾಹಸದ ಬಗ್ಗೆ ಇದೀಗ ಉಳುವರೆಯಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ಆ ನಾಲ್ವರು ಮಕ್ಕಳು ಗೌಡರ ಸಾಹಸಕ್ಕೆ ಶರಣಾಗಿದ್ದಾರೆ.




Discussion about this post