ಶಿರೂರು ಗುಡ್ಡ ಕುಸಿತ ದುರಂತದಿoದ ಈವರೆಗೆ 8 ಶವ ದೊರೆತಿದ್ದು, ಇನ್ನೂ ಮೂವರಿಗಾಗಿ ಶೋಧ ನಡೆಯುತ್ತಿದೆ. ಈ ನಡುವೆ ಎರಡು ವಾರದ ನಂತರ ಶಿರೂರಿಗೆ ಆಗಮಿಸಿದ ಉಡುಪಿ ದ್ವಾರಕಾಮಯಿ ಮಠದ ಸಾಯಿಈಶ್ವರ ಸ್ವಾಮೀಜಿ ಇಲ್ಲಿ 17 ಶವ ಇರುವುದಾಗಿ ಹೇಳಿದ್ದಾರೆ. ಅದರಲ್ಲಿಯೂ ಅರ್ಜುನ ಶವ ನೀರಿನಿಂದ ಮೇಲೆ ಬಂದು ನದಿಯಲ್ಲಿ ಕೊಚ್ಚಿ ಹೋಗಿರುವುದನ್ನು ತಾವು ದಿವ್ಯದೃಷ್ಠಿಯಿಂದ ನೋಡಿರುವುದಾಗಿ ಹೇಳಿಕೊಂಡಿದ್ದಾರೆ!
ತಮ್ಮಲ್ಲಿರುವ ಗುಂಡಿನ ಆಕಾರದ ಪೆಂಡೋಲಮ್ ಹಾಗೂ ಎಲೆಕ್ಟ್ರಾನಿಕ್ ಸ್ಕ್ಯಾನಿಂಗ್ ಮೂಲಕ ಹುಡುಕಾಟ ನಡೆಸಿದ ಅವರು `ಮಣ್ಣು ಹಾಗೂ ನೀರಿನ ಆಳದಲ್ಲಿ ಇನ್ನೂ 9 ಶವಗಳಿದೆ. ನದಿಯ 24 ಅಡಿ ಆಳದಲ್ಲಿ ಲಾರಿ ಸಿಲುಕಿದ್ದು, ಅದರ ಹತ್ತಿರವೇ ಒಂದು ಶವವಿದೆ’ ಎಂದು ಹೇಳಿದ್ದಾರೆ. ಲಾರಿ ಚಾಲಕ ಅರ್ಜುನ್ ಹಾಗೂ ಲೋಕೇಶ್’ನ ಶವ ಎಷ್ಟು ಹುಡುಕಿದರೂ ಸಿಗುವುದಿಲ್ಲ. ನದಿಯಿಂದ 15 ಅಡಿ ಆಳದಲ್ಲಿ ಜಗನ್ನಾಥರ ಶವವಿದ್ದು, ಅದು ಮಾತ್ರ ಸಿಗಲಿದೆ ಎಂಬುದು ಸ್ವಾಮೀಜಿಯ ಭವಿಷ್ಯ.
ಕಳೆದ ಎರಡು ವಾರದಿಂದ ಮಿಲಟರಿ ಪಡೆ, ಭಾರತೀಯ ನೌಕಾನೆಲೆ, ತಟರಕ್ಷಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಶವ ಹುಡುಕಾಟಕ್ಕೆ ನಿರಂತರ ಪ್ರಯತ್ನ ಮುಂದುವರೆಸಿದೆ. ಈ ನಡುವೆ ಈಶ್ವರ ಮಲ್ಪೆ ತಂಡದವರು ಆಗಮಿಸಿದರೂ ನೀರಿನ ಆಳ ಪ್ರವೇಶಿಸಲು ಸಾಧ್ಯವಾಗಿಲ್ಲ. ಡ್ರೋಣ್ ಹಾಗೂ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಸಹ ಲಾರಿ ಹಾಗೂ ಸಾವನಪ್ಪಿದವರ ಬಗ್ಗೆ ನಿಖರ ಮಾಹಿತಿ ಗೊತ್ತಾಗಿಲ್ಲ. ಡ್ರೋಣ್ ಹಾಗೂ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ 4 ಕಡೆ ಲೋಹದ ವಸ್ತು ಇರುವ ಬಗ್ಗೆ ದೃಢವಾಗಿದ್ದು, ಇದೀಗ ಸ್ವಾಮೀಜಿ ಅರ್ಜುನನ ಲಾರಿ ಜೊತೆ ಇನ್ನೂ ಎರಡು ವಾಹನಗಳು ನದಿ ಆಳದಲ್ಲಿದೆ. ತಾನು ಹೇಳಿದ ಕಡೆ ಹುಡುಕಾಟ ನಡೆಸಬೇಕು ಎಂಬುದು ಸ್ವಾಮೀಜಿಯ ಆಗ್ರಹಿಸಿದ್ದಾರೆ.
ಸೋಮವಾರ ಶಿರೂರಿಗೆ ಬಂದ ಸ್ವಾಮೀಜಿ ಮಾಡಿದ್ದೇನು? ವಿಡಿಯೋ ಇಲ್ಲಿ ನೋಡಿ..




Discussion about this post