ಸುಬ್ರಾಯ ಭಟ್ಟರ ಮದ್ಧಳೆ ವಾದನ |ಶಂಕರ ಭಟ್ಟರ ಭಾಗವತಿಕೆ | ನಾರಾಯಣ ಭಟ್ಟರ ಕುಣಿತ-ಪ್ರಸಂಗ ರಚನೆ
ಅಂಕೋಲಾ ತಾಲೂಕಿನ ಬ್ರಹ್ಮೂರಿನ ಸುಬ್ರಾಯ ಶಂಕರ ಭಟ್ ಓದಿದ್ದು 4ನೇ ತರಗತಿ. ಆದರೆ, ಅವರೊಳಗಿನ ಕಲೆ ಅಪಾರ!
ಅಜ್ಜ ಗೋವಿಂದ ಹೆಗಡೆ ಅವರ ಮೊದಲ ಗುರು. ಹೀಗಾಗಿ ಬಾಲ್ಯದಲ್ಲಿಯೇ ಯಕ್ಷಗಾನದ ಬಗ್ಗೆ ಪ್ರೀತಿ ಬೆಳಸಿಕೊಂಡರು. ಮದ್ದಳೆ ವಾದನವನ್ನು ಅಭ್ಯಾಸ ಮಾಡಿದರು. ಮಹಾದೇವ ಪುರಾಣಿಕರ ಮಾರ್ಗದರ್ಶನದಲ್ಲಿ ಊರ ಸುತ್ತಮುತ್ತಲಿನ ತಾಳಮದ್ದಳೆ ಮತ್ತು ಯಕ್ಷಗಾನಗಳಲ್ಲಿ ಕಲಾ ಸೇವೆ ಮಾಡುವುದು ಅವರ ನೆಚ್ಚಿನ ಹವ್ಯಾಸ. ಉತ್ತರ ಕನ್ನಡದಲ್ಲಿ ಮೊದಲು ಬಳಕೆಯಲ್ಲಿದ್ದ `ಬೆರಳು ಉರುಳಿಕೆ’ ಕ್ರಮದ ಮದ್ದಳೆಗಾರಿಕೆ ಸುಬ್ರಾಯ ಭಟ್ಟರ ವಿಶೇಷ.
ಕೃಷಿ ಕಾರ್ಯ, ಸಾಂಸಾರಿಕ ಹೊಣೆಗಾರಿಕೆಯಿಂದ ಬೇರೆ ಬೇರೆ ಮೇಳಗಳಲ್ಲಿ ಭಾಗವಹಿಸಲು ಅವರಿಗೆ ಆಗಲಿಲ್ಲ. ಅವರಲ್ಲಿನ ಯಕ್ಷಪ್ರೀತಿ ಮಗನಿಗೂ ಬಳುವಳಿಯಾಗಿ ಬಂದಿತು. ಇದರ ಪರಿಣಾಮವಾಗಿ ಸುಬ್ರಾಯ ಭಟ್ಟ ಅವರ ಪುತ್ರ ಬ್ರಹ್ಮೂರು ಶಂಕರ ಭಟ್ ಬಡಗುತಿಟ್ಟಿನ ಪ್ರಖ್ಯಾತ ಭಾಗವತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ಸುಬ್ರಾಯ ಭಟ್ಟರ ಸಹೋದರ ನಾರಾಯಣ ಭಟ್ ಕೂಡ ಕಲಾವಿದರು. ಪ್ರಸಂಗ ರಚನೆಕಾರರಾಗಿ ಅವರು ಪ್ರಸಿದ್ಧಿ ಪಡೆದಿದ್ದಾರೆ.
ಕೃಫೆ: ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ
Discussion about this post