ಮೈಸೂರು: ಜಗತ್ ಪ್ರಸಿದ್ಧ ಸರೋದ್ ವಾದಕ, ಪದ್ಮಶ್ರೀ ಪುರಸ್ಕೃತ ಪಂಡಿತ್ ರಾಜೀವ್ ತಾರಾನಾಥ್ (91) ಮೈಸೂರಿನಲ್ಲಿ ನಿಧನರಾದರು.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತೀವ್ರ ಅಸ್ವಸ್ಥರಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾರಾನಾಥ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
1932 ರ ಅಕ್ಟೋಬರ್ 17 ರಂದು ಬೆಂಗಳೂರಿನಲ್ಲಿ ಜನಿಸಿದ ರಾಜೀವ್ ತಾರಾನಾಥ್ ತಮ್ಮ ತಂದೆ ಪಂಡಿತ್ ತಾರಾನಾಥ್ ಅವರಿಂದ ಗಾಯನ ಸಂಗೀತದಲ್ಲಿ ಆರಂಭಿಕ ತರಬೇತಿಯನ್ನು ಪಡೆದು, ಅತ್ಯಂತ ಕಿರಿಯ ವಯಸ್ಸಿನಲ್ಲೇ (9 ರ‍್ಷ) ಸರ‍್ವಜನಿಕ ಕರ‍್ಯಕ್ರಮ ನೀಡಿದ್ದರು.
ಸಾಹಿತ್ಯದಲ್ಲಿ ಪಿಎಚ್‌ಡಿ ಪಡೆದಿದ್ದ ರಾಜೀವ್ ತಾರಾನಾಥ್ ತಿರುಚಿರಾಪಳ್ಳಿಯ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಸಂಗೀತ ಕ್ಷೇತ್ರದೆಡೆಗಿನ ತಮ್ಮ ಆಸಕ್ತಿಗಾಗಿ ವೃತ್ತಿಯನ್ನು ತ್ಯಜಿಸಿ ಕಲ್ಕತ್ತಾದಲ್ಲಿ ಅಲಿ ಅಕ್ಬರ್ ಖಾನ್ ಮರ‍್ಗರ‍್ಶನದಲ್ಲಿ ಸರೋದ್ ತರಬೇತಿ ಪಡೆದಿದ್ದರು.
Discussion about this post