ಅಗಸ್ಟ 15ರ ಗುರುವಾರ ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಅತ್ಯಂತ ಸಡಗರ ಹಾಗೂ ಸಂಭ್ರಮದಿoದ ಸ್ವಾತಂತ್ರೋತ್ಸವ (Independence day) ಆಚರಣೆ ನಡೆದಿದ್ದು, ಕಾರವಾರದ ಪೊಲೀಸ್ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರೋತ್ಸಾಹವಾಗಿ ಲಾಪ್‌ಟಾಪ್ ವಿತರಿಸಲಾಯಿತು

ಪೊಲೀಸ್ ಸೇರಿ ವಿವಿಧ ತುಕಡಿಯವರು ಶಿಸ್ತಿನ ಪಥಸಂಚಲನ ನಡೆಸಿದರು. 16 ತಂಡಗಳಿ0ದ ಪಥ ಸಂಚಲನ ನಡೆಯಿತು. ನಂತರ ಮಂಕಾಳು ವೈದ್ಯ 78ನೇ ಸ್ವಾತಂತ್ರ‍್ಯ ದಿನಾಚರಣೆ ಸಂದೇಶ ಸಾರಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಲ್ವೇಕರ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಉಪಸ್ಥಿತರಿದ್ದರು.
ಹಲವು ಸಾಧಕರಿಗೆ ಈ ವೇಳೆ ಸನ್ಮಾನ ನಡೆಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ನಡೆದ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು.
ಕಾರವಾರದಲ್ಲಿ ನಡೆದ ಸ್ವಾತಂತ್ರೋತ್ಸವ ಸಂಭ್ರಮದ ವಿಡಿಯೋ ಇಲ್ಲಿ ನೋಡಿ…
Discussion about this post