6
  • Latest

ರಸ್ತೆಯೇ ಮಾಯ.. ಎಲ್ಲವೂ ಹೊಂಡಮಯ..!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಸ್ತೆಯೇ ಮಾಯ.. ಎಲ್ಲವೂ ಹೊಂಡಮಯ..!

AchyutKumar by AchyutKumar
in ಸ್ಥಳೀಯ

ಸದಾಶಿವಗಡ-ಔರಾದ ರಾಜ್ಯ ಹೆದ್ದಾರಿಯ ಕುಂಬಾರವಾಡಾ-ಜೋಯಿಡಾ ಅಣಶಿವರಗೆ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ. ಇದರಿಂದ ನಿತ್ಯ ಓಡಾಡುವವರಿಗೆ ಸಮಸ್ಯೆಯಾಗಿದೆ.

ADVERTISEMENT

ರಸ್ತೆಯ ಯಾವ ಕಡೆ ನೋಡಿದರೂ ಹೊಂಡ ಕಾಣುತ್ತಿದ್ದು ಬೈಕ್ ಸವಾರರು ಒಂದು ಹೊಂಡ ತಪ್ಪಿಸಿದರೆ ಇನ್ನೊಂದು ಹೊಂಡಕ್ಕೆ ಬೀಳುತ್ತಿದ್ದಾರೆ. ರಾತ್ರಿ ವೇಳೆ ಸಂಚರಿಸುವವರ ಬೈಕಿನಿಂದ ಬಿದ್ದು ಗಾಯಗೊಂಡಿದ್ದಾರೆ. ಹೊಂಡದಲ್ಲಿ ನೀರು ತುಂಬಿದ್ದರಿ0ದ ಅದರ ಆಳ ಗೊತ್ತಾಗದೇ ಅನೇಕರು ಸಮಸ್ಯೆಯಲ್ಲಿದ್ದಾರೆ.

ದೊಪಣ, ಡಿಗ್ಗಿ ತಿರುವು, ಬಾಡಪೋಲಿ, ಭಾರಡಿ, ಅಣಶಿವರೆಗಿನ 14 ಕಿಮೀ ರಸ್ತೆ ಹಾಳಾಗಿದೆ. ರಸ್ತೆ ಹಾಳಾದ ನೆಪದಲ್ಲಿ ಈ ಭಾಗದಲ್ಲಿ ಸಂಚರಿಸುವ ಬಸ್ಸುಗಳು ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸುತ್ತಿಲ್ಲ.

Advertisement. Scroll to continue reading.

ಸರ್ಕಾರಿ ಶಾಲೆಗೆ ರಾಜ್ಯ ಪ್ರಶಸ್ತಿ

Advertisement. Scroll to continue reading.

ಅಂಕೋಲಾ: ಬೊಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದಿoದ ನೀಡುವ ರಾಜ್ಯಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿ ದೊರೆತಿದೆ. ಶಾಲೆಯ ಪರವಾಗಿ ಮುಖ್ಯಾಧ್ಯಾಪಕ ಜಗದೀಶ ಜಿ ನಾಯಕ ಹೊಸ್ಕೇರಿ ಪ್ರಶಸ್ತಿಯನ್ನು ಸ್ವೀಕರಿಸಿದರು. ರಾಜ್ಯ ಹೈಕೋರ್ಟ್ ನ್ಯಾಯಾಧೀಶೆ ಕೆ.ಎಸ್.ಮುದುಗಲು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಖೋ ಖೋ ಪಂದ್ಯಾವಳಿ: ಹಳಗಾ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ

ಕಾರವಾರ: ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಳಗಾದ ಮಾಡರ್ನ ಪ್ರೌಢಶಾಲೆಯವರು ಖೋ ಖೋ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದಿತ್ಯ ಅಣಸೀಕರ ಈ ತಂಡದ ನೇತ್ರತ್ವವಹಿಸಿದ್ದರು. ದೈಹಿಕ ಶಿಕ್ಷಕ ಹರೀಶ ನಾಯಕ ತರಬೇತಿ ನೀಡಿದ್ದರು.

ಹಾಲಕ್ಕಿಗರ ಪರ ಸ್ವಾಮೀಜಿ ಧ್ವನಿ: ಸಂಸದರಿಗೆ ಮನವಿ ಸಲ್ಲಿಸಿದ ರಾಘವೇಶ್ವರ ಶ್ರೀ

ಕುಮಟಾ: `ಹಾಲಕ್ಕಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮನವಿ ಸಲ್ಲಿಸಿದ್ದಾರೆ.
`ಹಾಲಕ್ಕಿ ಸಮುದಾಯದವರ ಬೇಡಿಕೆಗೆ ಸ್ಪಂದಿಸಬೇಕು. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ರಾಘವೇಶ್ವರ ಶ್ರೀ ಆಗ್ರಹಿಸಿದ್ದಾರೆ. `ಹಾಲಕ್ಕಿ ಒಕ್ಕಲಿಗ ಜನಾಂಗ ಈ ಮೊದಲೇ ಪರಿಶಿಷ್ಟ ಪಂಗಡಕ್ಕೆ ಸೇರಬೇಕಿತ್ತು. ಆದರೆ ಎಷ್ಟು ಪ್ರಯತ್ನಿಸಿದರೂ ಕಾರ್ಯ ಮಾತ್ರ ಸಫಲವಾಗಲಿಲ್ಲ. ತಾವು ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರಾಗಿದ್ದು, ಕೇಂದ್ರದಲ್ಲಿ ಈ ಪ್ರಸ್ತಾವನೆಯನ್ನು ಅತ್ಯಂತ ಮುತುವರ್ಜಿವಹಿಸಿ ಕಾರ್ಯ ಸಾಧ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದರು.

ಸoಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ `ಆದಷ್ಟು ಶೀಘ್ರವಾಗಿ ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸಂಬoಧಪಟ್ಟವರೊ0ದಿಗೆ ಮಾತನಾಡುತ್ತೇನೆ’ ಎಂದರು. ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮು ಗೌಡ ಇತರರು ಇದ್ದರು.

ಸೆ.17ರಿಂದ ಶ್ವಾನಗಳಿಗೆ ಉಚಿತ ಲಸಿಕೆ ಶಿಬಿರ

ಸಿದ್ದಾಪುರ: ಸ್ಥಳೀಯ ಪಶು ಆಸ್ಪತ್ರೆ ಆವರಣದಲ್ಲಿ ಸೆ.17ರಿಂದ 21ರವರೆಗೆ ನಿತ್ಯ ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ರೇಬಿಸ್ ರೋಗ ತಡೆಗಟ್ಟುವ ಸಲುವಾಗಿ ಎಲ್ಲ ನಾಯಿಗಳಿಗೆ ಹುಚ್ಚು ರೋಗದ ವಿರುದ್ಧ ಮುಂಜಾಗೃತೆಯಾಗಿ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ತಮ್ಮ ನಾಯಿಗಳನ್ನು ಪಟ್ಟಣದ ಪಶು ಆಸ್ಪತ್ರೆಗೆ ತಂದು ಲಸಿಕೆ ಹಾಕಿಸಿಕೊಳ್ಳುವಂತೆ ಪಶುಸಂಗೋಪನಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಟಿಆರ್‌ಸಿಗೆ ಅತ್ಯುತ್ತಮ ಸಾಧನಾ ಪ್ರಶಸ್ತಿ

ಶಿರಸಿ: ಸಹಕಾರ ವ್ಯವಸ್ಥೆಯಲ್ಲಿ ವಿವಿಧ ವೈಶಿಷ್ಟತೆಯನ್ನು ಹೊಂದಿರುವ ಇಲ್ಲಿನ ಟಿಆರ್‌ಸಿಯ ಉತ್ತಮ ಕಾರ್ಯನಿರ್ವಹಣೆಗಾಗಿ ರಾಜ್ಯಮಟ್ಟದ ‘ಅತ್ಯುತ್ತಮ ಸಾಧನಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಅವರಿಗೆ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾದ ಬೆಳ್ಳಿ ಪ್ರಕಾಶ ಬ್ಯಾಂಕಿನ ನಿರ್ದೇಶಕರೊಂದಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಅನುಷಾಗೆ ಒಲಿದ ಚಿನ್ನದ ಪದಕ
ಶಿರಸಿ: ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವದಲ್ಲಿ ಅನುಷಾ ಹೆಗಡೆ ಸುಗಾವಿ ಚಿನ್ನದ ಪದಕ ಪಡೆದಿದ್ದರೆ.
`ಮಾಸ್ಟರ್ ಆಫ್ ಬಿಸನೆಸ್’ ವಿಷಯದಲ್ಲಿ ಅವರು ಮಾಡಿದ ಸಾಧನೆಗೆ ಈ ಪದಕ ದೊರೆತಿದೆ.
ಅನುಷಾ ಹೆಗಡೆ ಅವರು ಶಿರಸಿ ಸೋಂದಾದ ಬಾಡಲಕೊಪ್ಪದವರು. ಶಿರಸಿ ಸುಗಾವಿಯ ಪಣತದಮನೆಯ ಶಶಾಂಕ ಹೆಗಡೆ ಅವರನ್ನು ವರಿಸಿದ್ದಾರೆ. ಸಮಾಜ ವಿಜ್ಞಾನ ಸಂಶೋಧನೆಯ ಭಾರತೀಯ ಪರಿಷದ್ ಉಪಾಧ್ಯಕ್ಷ  ದೀಪಕ ಕುಮಾರ, ಸಂಗೀತ ನಿರ್ದೇಶಕ ಗುರುಕಿರಣ್, ಪದ್ಮಶ್ರೀ ಪುರಸ್ಕೃತ ಕೆ.ಎಸ್.ರಾಜಣ್ಣ ಇತರರು ಅನುಷಾ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಿದರು.
ಕಾಡು ಹಂದಿಗಳ ಸರಣಿ ಸಾವು

ಹೊನ್ನಾವರ: ಹೆರಾವಲಿ ಗ್ರಾಮದಲ್ಲಿ ಕಾಡು ಹಂದಿಗಳು ಸರಣಿ ಸಾವಾಗುತ್ತಿದೆ.

ಕಳೆದ ಮೂರು ದಿನಗಳ ಹಿಂದೆ ತೀರ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಚಿಕಿತ್ಸೆಗೆ ಒಯ್ಯುವಾಗ ಅದು ಸಾವನಪ್ಪಿತ್ತು. ಬೇರೆ ಬೇರೆ ಕಡೆ ಸಹ ಹಂದಿ ಸಾವನಪ್ಪಿರುವ ಬಗ್ಗೆ ಜನ ಮಾಹಿತಿ ನೀಡಿದ್ದರು. ಇದೀಗ ಇನ್ನೊಂದು ಹಂದಿ ಸಾವನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಡುಹಂದಿಯನ್ನು ಮರಣೋತ್ತರ ಪರೀಕ್ಷೆ ನಡೆಸಿ ಅದನ್ನು ಅರಣ್ಯ ಸಿಬ್ಬಂದಿ ಸುಟ್ಟು ಹಾಕಿದರು. ಕಾಡು ಹಂದಿಗಳ ನಿಗೂಡ ಸಾವಿಗೆ ಕಾರಣ ಪತ್ತೆಯಾಗಿಲ್ಲ.

ಸ್ಕೋಡ್‌ವೆಸ್ ನಿರ್ದೇಶಕನಿಗೆ ಪ್ರಶಸ್ತಿಯ ಗರಿ

ಶಿರಸಿ: ಸ್ಕೊಡವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ್ ನಾಯ್ಕ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲ ಸಂಘದ `ಪರಿವರ್ತನ ಶ್ರೀ’ ಪ್ರಶಸ್ತಿ ದೊರೆತಿದೆ. ಸೆ 29ರಂದು ಬೆಂಗಳೂರಿನಲ್ಲಿ ಶ್ರೀ ನಾರಾಯಣ ಗುರು ಜಯಂತ್ಯೋತ್ಸವದಲ್ಲಿ ಈ ಪ್ರಶಸ್ತಿಯನ್ನು ಅವರು ಸ್ವೀಕರಿಸಲಿದ್ದಾರೆ.

ಧರ್ಮಸ್ಥಳ ಸಂಘದಿoದ ಶಿಷ್ಯ ವೇತನ

ಕುಮಟಾ: ನಾದಶ್ರೀ ಕಲಾಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಪ್ರತಿಭಾನ್ವಿತರಿಗೆ ಶಿಷ್ಯ ವೇತನ ನೀಡಿದರು.

ಕುಮಟಾದ 236 ವಿದ್ಯಾರ್ಥಿಗಳಿಗೆ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಹಾಗೂ ಪ್ರಮುಖರಾದ ವಾಸುದೇವ ನಾಯ್ಕ ಮಂಜೂರಿ ಪತ್ರ ವಿತರಿಸಿದರು. ಯೋಜನೆಯ ನಿರ್ದೇಶಕ ಮಹೇಶ ಎಂ ಡಿ, ತಾಲೂಕಿನ ಯೊಜನಾಧಿಕಾರಿ ಕಲ್ಮೇಶ ಎಂ, ಮೇಲ್ವಿಚಾರಕ ಕೇಶವ ಇತರರಿದ್ದರು.

 

Previous Post

ಲೋಕಾಯುಕ್ತ ಅಧಿಕಾರಿಗಳ ಬಸ್ ಸಂಚಾರ!

Next Post

ಹೇಗಿರಲಿದೆ ಭವಿಷ್ಯದ ಭಾರತ? ವಿಜ್ಞಾನ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಪಾಠ!

Next Post

ಹೇಗಿರಲಿದೆ ಭವಿಷ್ಯದ ಭಾರತ? ವಿಜ್ಞಾನ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಪಾಠ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ