ಶಿರಸಿ: `ಕೆಳ ಹಂತದ ನ್ಯಾಯಧೀಶರ ನೇಮಕ ವಿಷಯದಲ್ಲಿ ಸಾಮಾಜಿಕ ನ್ಯಾಯ ಪಾಲಿಸುತ್ತಿರುವ ಸರ್ಕಾರ ಉಚ್ಛ ಮತ್ತು ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡುತ್ತಿಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಹೇಳಿದ್ದಾರೆ.
`ರಾಜಕೀಯ ಪಿತೂರಿಗಳು ಮತ್ತು ನ್ಯಾಯಾಲಯದ ಇತ್ತೀಚಿನ ಆದೇಶ’ ಎಂಬ ವಿಷಯದ ಕುರಿತು ಬೆಂಗಳೂರಿನಲ್ಲಿ ನಡೆದ ವಕೀಲರ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.
`ಭಾರತದ ಸಂವಿಧಾನವು ಆಡಳಿತಾತ್ಮಕವಾಗಿ ಸಂವಿಧಾನ ಬದ್ಧ ಸಾಮಾಜಿಕ ನ್ಯಾಯದ ಪರಿಪಾಲನೆ ಆಗುತ್ತಿದೆ. ಇತ್ತೀಚಿಗೆ ನ್ಯಾಯಾಲಯದ ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ಮೀಸಲಾತಿ ಅಳವಡಿಸದೇ ಇರುವುದರಿಂದ ಸಾಮಾಜಿಕ ಪರಿಪಾಲನೆ ಮಾಡುವಲ್ಲಿ ಗಂಭೀರ ಚಿಂತನೆ ಅವಶ್ಯ’ ಎಂದವರು ಪ್ರತಿಪಾದಿಸಿದರು.