6

ಹಾವೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫ್ರೆಷರ್ಸ್ ಡೇ ಸಂಭ್ರಮ

“ಕಲಿಕೆ ಜೀವನದ ಅನುಭವವಾಗಬೇಕು : ಡಾ. ಬಸವರಾಜ ಬಣಕಾರ
ಹಾವೇರಿ* ಅ. 28: ಕಲಿಕೆ ಅನುಭವವಾದಾಗ ಮಾತ್ರ ಅದು ನಮ್ಮ ಬದುಕಿನಲ್ಲಿ ಅರ್ಥಪೂರ್ಣವಾಗುತ್ತದೆ. ವಿದ್ಯಾರ್ಥಿಗಳು ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆ ಸಾಧ್ಯವಾಗುತ್ತದೆ ಎಂದು ದಾವಣಗೆರೆಯ ವಿಶ್ವವಿದ್ಯಾಲಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಬಸವರಾಜ ಬಣಕಾರ ಅಭಿಪ್ರಾಯಪಟ್ಟರು.
ನಗರದ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು (ಫ್ರೆಷರ್ಸ್ ಡೇ) ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ವೈ.ಎಫ್. ನದಾಫ್, ಕಲಿಕೆ ಕೇವಲ ಪದವಿಗೆ ಸೀಮಿತವಾಗದೆ ಜೀವನ ಮೌಲ್ಯಗಳನ್ನು ರೂಪಿಸಬೇಕು. ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪರಿಶ್ರಮದಿಂದ ಓದಿದರೆ ಜೀವನದಲ್ಲಿ ಯಾವುದೇ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.
ಡಾ. ಬಸವರಾಜಪ್ಪ ಪಿ.ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜನಾರ್ಧನ ಕುಮಾರ ಬಿ., ಡಾ. ಚಂದ್ರಪ್ರಭಾ ಪಟಗಾರ, ಡಾ. ನಾಗರಾಜ ದಳಪತಿ, ಶ್ರೀಮತಿ ಮೀನಾಕ್ಷಿ ವಕ್ಕುಂದಮಠ, ಪ್ರೊ. ಮಲ್ಲಿಕಾರ್ಜುನ ಗೌಡ, ಪ್ರೊ. ಮಂಜುನಾಥ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪೂಜಶ್ರೀ ಪ್ರಾರ್ಥಿಸಿದರು. ಅಕ್ಷತಾ ಸ್ವಾಗತಿಸಿದರು. ನಂದಾ ಅತಿಥಿಗಳನ್ನು ಪರಿಚಯಿಸಿದರು. ಪೂಜಶ್ರೀ ಮತ್ತು ಬಸವರಾಜ ನಿರೂಪಿಸಿದರು. ಸುಧಾ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

  • Related Posts

    ಎಸ್.ವಿ. ಸಂಕನೂರ ಗೆಲುವು: ಹಾವೇರಿಯಲ್ಲಿ ಬಿಜೆಪಿ ಸಂಭ್ರಮ!

    Share this… Facebook Pinterest Twitter Linkedin Whatsappಎಸ್.ವಿ. ಸಂಕನೂರ ಗೆಲುವು: ಹಾವೇರಿಯಲ್ಲಿ ಬಿಜೆಪಿ ನಾಯಕರಿಂದ ಸಿಹಿ ಹಂಚಿ ಸಂಭ್ರಮ ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ…

    ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕೌಂಟ್‌ಡೌನ್ ಶುರು? ಬೊಮ್ಮಾಯಿ ಸ್ಫೋಟಕ ಹೇಳಿಕೆ!

    Share this… Facebook Pinterest Twitter Linkedin Whatsappಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಸರ್ಕಾರದ ಕೌಂಟ್‌ಡೌನ್ ಶುರು – ಬಸವರಾಜ ಬೊಮ್ಮಾಯಿ 2028ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟಕ್ಕೆ ಬಹುಮತದ ಗೆಲುವು ಶತಸಿದ್ಧ: ಮಾಜಿ ಸಿಎಂ ವಿಶ್ವಾಸ ಬೆಂಗಳೂರು: ವಿಧಾನ ಪರಿಷತ್ತಿನ…

    You cannot copy content of this page