6

ಹಿರೇಕೆರೂರಿನಲ್ಲಿ ಕಾಂಗ್ರೆಸ್‌ಗೆ ಶಾಕ್! ಬಿಜೆಪಿ ಸೇರಿದ ಮುಖಂಡರು

ಹಿರೇಕೆರೂರು: ವರಹ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ವರಹ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಜನವಿರೋಧಿ ಧೋರಣೆಗಳಿಂದ ಬೇಸತ್ತು ಬಿಜೆಪಿ ಸೇರ್ಪಡೆಯಾಗಿರುವುದಾಗಿ ಮುಖಂಡರು ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಮಂಜಪ್ಪ ಗುಡ್ಡಪ್ಪ ಗಡಿಯನ್ನನವರ್ ಅವರ ನೇತೃತ್ವದಲ್ಲಿ ರಂಗಪ್ಪ ಬಿದರಕೊಪ್ಪ, ರವಿ ಸೊಪ್ಪಿನ, ಕೆಂಚಪ್ಪ ಚಿಕ್ಕಣ್ಣನವರ್, ರಾಜು ಸೊಪ್ಪಿನ್, ಕಲ್ಲಪ್ಪ ಇಂಗಳಗೊಂದಿ, ಅಶೋಕ್ ಸೊಪ್ಪಿನ್, ಗುಡ್ಡದಯ್ಯ ಕೊಪ್ಪದ, ಯೋಗೇಶ್ ಗೋಣೆಪ್ಪನವರ್, ಶಿವಪ್ಪ ಮಡಿವಾಳರ ಹಾಗೂ ಹನುಮಗೌಡ ಈರಪ್ಪ ನೂಲಗೇರಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ್ ಬಾಳಿಕಾಯಿ, ರುದ್ರಗೌಡ ಪಾಟೀಲ್, ಮಂಜಪ್ಪ ಸಿರಗಂಬಿ, ಸುರೇಶ್ ಮಡಿವಾಳರ್, ಚೌಡಪ್ಪ ಪೂಜಾರ್, ಮಂಜಪ್ಪ ಸೊಪ್ಪಿನ, ಬಸವರಾಜ್ ಕುರುವತ್ತಿ, ಚಂದ್ರಪ್ಪ ಹರಿಜನ್, ರುದ್ರೇಶ್ ಬಿಳಗಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ವರಹ ಗ್ರಾಮದಲ್ಲಿ ನಡೆದ ಈ ಪಕ್ಷ ಸೇರ್ಪಡೆ ಕಾರ್ಯಕ್ರಮ ಸ್ಥಳೀಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

  • Related Posts

    ಹಿರೇಕೆರೂರು, ರಟ್ಟಿಹಳ್ಳಿಯಲ್ಲಿ ಬಿಜೆಪಿ ವಿಜಯೋತ್ಸವ!

    Share this… Facebook Pinterest Twitter Linkedin Whatsappಸಂಕನೂರ ಗೆಲುವಿನ ಸಂಭ್ರಮ: ಹಿರೇಕೆರೂರು, ರಟ್ಟಿಹಳ್ಳಿಯಲ್ಲಿ ಬಿಜೆಪಿ ವಿಜಯೋತ್ಸವ ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳು ಗೆಲುವು…

    ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ಸ್ಪರ್ಶ: ರೈತ ಸಾವು

    Share this… Facebook Pinterest Twitter Linkedin Whatsappಹಾವೇರಿ: ವಿದ್ಯುತ್ ಸ್ಪರ್ಶಿಸಿ ರೈತ ಸಾವು; ಸ್ಥಳಕ್ಕೆ ಶಾಸಕ ಯು.ಬಿ. ಬಣಕಾರ ಭೇಟಿ ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಳಗಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ 62 ವರ್ಷದ…

    You cannot copy content of this page