ಹಳ್ಳೂರಿನಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಮುಖಂಡರು; ಚುನಾವಣೆಗೆ ಮುನ್ನವೇ ರಾಜಕೀಯ ಚಟುವಟಿಕೆ ಚುರುಕು

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ತಾಲೂಕಿನ ಅಭಿವೃದ್ಧಿ ಕಾರ್ಯಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಹಳ್ಳೂರು ಗ್ರಾಮದ ಹಲವು ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಲೋಹಿತ್ ಕರಬಸಪ್ಪ ನರೇರ, ರವಿಸ್ವಾಮಿ ಪಾಟೀಲ್ ಹಾಗೂ ಚನ್ನಬಸಪ್ಪ ಸಾಸವಿಹಳ್ಳಿ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಬಿಜೆಪಿಗೆ ಸೇರ್ಪಡೆಗೊಂಡವರಲ್ಲಿ ನಿಂಗಪ್ಪ ಅಂಬಣ್ಣನವರ್, ಬಸವರಾಜ್ ಮಾಸ್ತಿ, ಅಬ್ದುಲ್ ರೆಹಮಾನ್ ಸಾಬ್ ಮುಲ್ಲಾ, ಚಂದ್ರಪ್ಪ ಸಾಸ್ವಿಹಳ್ಳಿ, ಯೋಗೇಶ್ ನಾಮದೇವ್, ಪ್ರಕಾಶ್ ಹೊಸಮನಿ, ಗುರುಮೂರ್ತಿ ಕಳ್ಳಿಮನಿ, ಬಸವರಾಜ್ ನಂದಿಹಾಳ ಹಾಗೂ ಕುಬೇರಪ್ಪ ಹಡಪದ್ ಸೇರಿದ್ದಾರೆ.
ಹಳ್ಳೂರು ಗ್ರಾಮದ ಅಭಿವೃದ್ಧಿ, ತಾಲೂಕಿನ ಪ್ರಗತಿ ಹಾಗೂ ರಾಷ್ಟ್ರೀಯ ನಾಯಕತ್ವದ ಬಲವರ್ಧನೆಯ ಉದ್ದೇಶದಿಂದ ಪಕ್ಷಕ್ಕೆ ಸೇರ್ಪಡೆಯಾಗಿರುವ ಮುಖಂಡರನ್ನು ಬಿಜೆಪಿ ಮುಖಂಡರು ಸ್ವಾಗತಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಜೀವಯ್ಯ ಕಬ್ಬಿಣಕಂತಿಮಠ, ಚಂದ್ರುಗೌಡ ಪಾಟೀಲ್, ರಂಗನಗೌಡ ಪಾಟೀಲ್, ಹನುಮಂತಪ್ಪ ಹಾಗೂ ಅಶೋಕ್ ಉಪಸ್ಥಿತರಿದ್ದರು.
ಶ್ರೀ ಕರ್ನಾಟಕ | ಹಾವೇರಿ ಸುದ್ದಿ






