6

ಬಂಗಲೆಗೆ ನುಗ್ಗಿ ಸಿಲೆಂಡರ್ ದೋಚಿದ ಕಳ್ಳರು!

ಕಾರವಾರ: ಬಾಡ – ನಂದನಗದ್ದಾದ ಜ್ಯೋತಿ ಪಾಟೀಲ ಅವರ ಮನೆಗೆ ನುಗ್ಗಿದ ಕಳ್ಳರು ಸಿಲೆಂಡರ್ ಕದ್ದು ಪರಾರಿಯಾಗಿದ್ದಾರೆ!
ಶಿವಾಜಿ ಕಾಲೇಜಿನ ಅಂಚಿನಲ್ಲಿ ರಸ್ತೆ ಪಕ್ಕ ಮನೆ ಹೊಂದಿರುವ ಜ್ಯೋತಿ ಪಾಟೀಲ ಅವರು ಜನತಾ ಬಜಾರ್ ಭಾರತ್ ಗ್ಯಾಸ್ ಸಿಲೆಂಡರ್’ನ ಗ್ರಾಹಕರಾಗಿದ್ದರು. ಕೆಳಗಡೆ ಮನೆಯನ್ನು ಅವರು ಬಾಡಿಗೆಗೆ ನೀಡಿದ್ದಾರೆ. ಮೊದಲನೇ ಮಹಡಿಯಲ್ಲಿ ಕುಟುಂಬದವರ ಜೊತೆ ವಾಸಿಸುತ್ತಿದ್ದಾರೆ. ಅವರ ಮನೆ ವರಾಂಡದಲ್ಲಿ ಯಾವಾಗಲೂ ತುಂಬಿದ ಸಿಲೆಂಡರ್ ಇರಿಸುತ್ತಿದ್ದರು.
ಶುಕ್ರವಾರ ರಾತ್ರಿ ಜೋರು ಮಳೆಯಾಗಿದ್ದರಿಂದ ಮನೆಯಿಂದ ಯಾರೂ ಹೊರಬಂದಿರಲಿಲ್ಲ. ಈ ವೇಳೆ ಕರೆಂಟ್ ಸಹ ಇರಲಿಲ್ಲ. ಹೀಗಾಗಿ ಕಳ್ಳರು ಬಂದು ಸಿಲೆಂಡರ್ ಹೊತ್ತೊಯ್ದಿರುವುದು ಅವರ ಅರಿವಿಗೆ ಬರಲಿಲ್ಲ. ಇನ್ನೂ ಅಷ್ಟು ದೊಡ್ಡ ಬಂಗಲೆ ನಿರ್ಮಿಸಿ, ಎಸಿ ಅಳವಡಿಸಿದ ಅವರು ಮನೆಗೆ ಸಿಸಿ ಕ್ಯಾಮರಾ ಅಳವಡಿಸಲು ಮರೆತಿದ್ದರು! ಶನಿವಾರ ಬೆಳಗ್ಗೆ ಮನೆ ಮುಂದಿನ ಸಿಲೆಂಡರ್ ಕಳ್ಳತನವಾಗಿರುವ ಬಗ್ಗೆ ಜ್ಯೋತಿ ಪಾಟೀಲ್ ಪೊಲೀಸ್ ದೂರು ನೀಡಿದ್ದು, ಕಳ್ಳತನವಾದ ಸಿಲೆಂಡರ್ ಹುಡುಕಿಕೊಡುವುದು ಪೊಲೀಸರಿಗೆ ತಲೆನೋವಾಗಿದೆ.

ಗ್ಯಾಸ್ ಸಿಲೆಂಡರ್ ಕಳ್ಳತನವಾದ ಬಂಗಲೆ ಹಾಗೂ ಸಿಲೆಂಡರ್ ಕಳ್ಳತನದ ಬಗ್ಗೆ ಜ್ಯೋತಿ ಅವರ ತಂದೆ ಯಶ್ವಂತ ಪಾಟೀಲ್ ವಿವರಿಸಿದ ವಿಡಿಯೋ ಇಲ್ಲಿ ನೋಡಿ..

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page