6

ನದಿ ಆಳದಲ್ಲಿ ಲಾರಿ: ಹುಡುಕಿದ್ದು ಯಾರು?

ಶಿರೂರು ಗುಡ್ಡ ಕುಸಿತ ಪ್ರಕರಣ ನಡೆದ ನಂತರ `ಹೆದ್ದಾರಿಯಲ್ಲಿ ಬಿದ್ದ ಮಣ್ಣಿನಲ್ಲಿ ಲಾರಿ ಹುದುಗಿದೆ’ ಎಂದು ಅಂದಾಜಿಸಲಾಗಿತ್ತು. ಆದರೆ, `ಅಲ್ಲಿ ಲಾರಿ ಇಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮೊದಲು ಅನುಮಾನ ವ್ಯಕ್ತಪಡಿಸಿದ್ದರು. ಅದಾದ ನಂತರ ನೌಕಾನೆಲೆ ಅಧಿಕಾರಿಗಳು ಸಹ ಲಾರಿ `ಹೆದ್ದಾರಿ ಮೇಲಿನ ಮಣ್ಣಿನಲ್ಲಿ ಇಲ್ಲ’ ಎಂದು ಖಚಿತಪಡಿಸಿದ್ದರು.
ಈ ಹಿನ್ನಲೆ ಬುಧವಾರದಿಂದ ಪೊಕ್ಲೆನ್ ಯಂತ್ರ ತರಿಸಿ ನದಿ ಆಳದಲ್ಲಿನ ಮಣ್ಣು ಬರಗುವ ಕೆಲಸ ನಡೆಸಲಾಗಿದ್ದು, ಮಣ್ಣನ್ನು ತೆಗೆಯುವಾಗ ಕಬ್ಬಿಣದ ಲೋಹ ಯಂತ್ರಕ್ಕೆ ತಗುಲಿದೆ. ಪ್ಲೊಕೆನ್ ಯಂತ್ರದ ಆಪರೇಟರ್ ಈ ಬಗ್ಗೆ ತಕ್ಷಣ ಅಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಆ ಭಾಗದಲ್ಲಿ ಮುಳುಗು ತಜ್ಞರು ಶೋಧ ನಡೆಸಿದಾಗ ಅಲ್ಲಿ ಲಾರಿ ಇರುವ ಕುರುಹು ಸಿಕ್ಕಿದೆ. ಪ್ರಸ್ತುತ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಶಾಸಕ ಸತೀಶ್ ಸೈಲ್ ಲಾರಿ ಇರುವ ಸ್ಥಳಕ್ಕೆ ಬೋಟ್ ಮೂಲಕ ತೆರಳಿದ್ದಾರೆ.
ಲಾರಿ ಹುಡುಕುವ ಕಾರ್ಯಾಚರಣೆ ಹೇಗಿತ್ತು? ವಿಡಿಯೋ ಇಲ್ಲಿ ನೋಡಿ..

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page